You are here
Home > Koppal News > ಕೊಪ್ಪಳದಲ್ಲಿ ಬೇಸಿಗೆ ಕೌಶಲ್ಯ ತರಬೇತಿಯ ಉಧ್ಘಾಟನೆ

ಕೊಪ್ಪಳದಲ್ಲಿ ಬೇಸಿಗೆ ಕೌಶಲ್ಯ ತರಬೇತಿಯ ಉಧ್ಘಾಟನೆ

ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕೊಪ್ಪಳದಲ್ಲಿ ಆರ್.ಎಮ್.ಎಸ್.ಎ ಅಡಿಯಲ್ಲಿ, ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ವತಿಯಿಂದ ಬೇಸಿಗೆ ಕೌಶಲ್ಯ ತರಬೇತಿಯ ಉದ್ಘಾಟನೆ ಕಾರ್ಯಕ್ರಮವು ದಿನಾಂಕ ೧೫/೦೪/೨೦೧೫ ರಂದು ಶಾಲೆಯಲ್ಲಿ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಡಾ||   ವಿ.ಬಿ.ರಡ್ಡೇರ ಪ್ರಾಂಶುಪಾಲರು ಸ.ಬಾ.ಪ.ಪೂ ಕಾಲೇಜು ಕೊಪ್ಪಳ ಇವರು ಉದ್ಘಾಟಿಸಿ, ಮಹಿಳಾ ಸಭಲೀಕರಣ, ಸ್ವಚ್ಛ ಭಾರತದ ನಿರ್ಮಾಣ, ಐ.ಟಿ ಹಾಗೂ ಹೆಲ್ತ್‌ಕೇರ್ನ ವಿಶೇಷತೆಗಳನ್ನು ಹಾಗೂ ಜ್ಞಾನವನ್ನು ಗ್ರಹಿಸುವುದರಿಂದ ನಮಗೆ ಆಗುವ ಲಾಭಗಳು ಹಾಗೂ ಜ್ಞಾನದ ಮೂಲ ಹಣವಲ್ಲ, ಹಣದ ಮೂಲ ಜ್ಞಾನ ಎಂದು ನೇರದಿರುವ ಎಲ್ಲ ವಿದ್ಯಾರ್ಥಿನಿಯರಿಗೆ, ಪೋಷಕರಿಗೆ ಹಾಗೂ ಎಲ್ಲ ಸಂಘ – ಸಂಸ್ಥೆಗಳಿಂದ ಬಂದತಹವರಿಗೆ ಮನದಟ್ಟು ಮಾಡಿದರು. ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲರಾದ ಶ್ರೀಮತಿ ಸರಿತಾ.ಜಿ ಇವರು ವಹಿಸಿಕೊಂಡಿದ್ದರು. ನಿರೂಪಣೆ ಹಾಗೂ ತರಬೇತಿಯ ಪ್ರಾಸ್ತಾವಿಕ ಬಾಷಣವನ್ನು ಮಹೇಶ ಹೆಬ್ಬಳ್ಳಿಯವರು ಮತ್ತು ರೇಖಾ ಗಾಣಿಗೇರವರು ವಂದನಾರ್ಪಣೆಯನ್ನು ಮಾಡಿದರು. 
೧) ೯ನೇ ತರಗತಿಯ ಎನ್.ಎಸ್.ಕ್ಯೂ.ಎಫ್ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಅವಧಿಯಲ್ಲಿ ಪುನರಾವರ್ತನೆ ವಿಶೇಷ ಕೌಶಲ್ಯ ತರಬೇತಿಗಳು ನಡೆಯುತ್ತವೆ.
೨) ಶಾಲೆಯಿಂದ ಹೊರಗುಳಿದ ಮಕ್ಕಳಿಗೆ, ಪೌಢಶಾಲೆ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಷಕರಿಗೆ, ಮಹಿಳೆಯರಿಗೆ, ಸ್ತ್ರೀ ಶಕ್ತಿ ಸಂಘ, ಹಾಲು ಉತ್ಪಾದಕ ಸಂಘ, ಹಾಗೂ ಇನ್ನಿತರ ಸಂಘ-ಸಂಸ್ಥೆಗಳಿಗೆ ಪ್ರತಿದಿನ ಒಂದು ಗಂಟೆ ಅವಧಿಗೆ ೧೦ ದಿನಗಳ ಅಲ್ಪಾವಧಿ ಬೇಸಿಗೆ ಕೌಶಲ್ಯ ತರಬೇತಿಯನ್ನು ಏರ್ಪಡಿಸಲಾಗಿದೆ. 

Leave a Reply

Top