ಹುಲಿಗೆಮ್ಮ ದೇವಿ ದೇವಸ್ಥಾನ : ಭಕ್ತಾದಿಗಳಿಗೆ ಸೂಚನೆ

 ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹೆಸರಿನಲ್ಲಿ ಯಾವುದೇ ಭಕ್ತಾದಿಗಳು ಯಾರಿಗೂ ಹಣ ಅಥವಾ ಕಾಣಿಕೆಗಳನ್ನು ನೀಡದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಸೂಚನೆ ನೀಡಿದ್ದಾರೆ. 
         ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ ’ಎ ’ ವರ್ಗದ ಅಧಿಸೂಚಿತ ದೇವಸ್ಥಾನವಾಗಿದು, ಈ ದೇವಸ್ಥಾನದಲ್ಲಿ ಜರುಗಲಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಾದ ವಾರ್ಷಿಕ ಜಾತ್ರೆ, ನವರಾತ್ರಿ ದಸರಾ, ಕಾರ್ತೀಕ ದೀಪೋತ್ಸವ, ಭಾರತ ಹುಣ್ಣಿಮೆ, ಮತ್ತು ದೈನಂದಿನ ಪೂಜೆಗಳ  ನಿರ್ವಹಣೆಯನ್ನು ದೇವಸ್ಥಾನದ ವತಿಯಿಂದ ನಿರ್ವಹಿಸಲಾಗುತ್ತಿದೆ.  ಅಲ್ಲದೆ ಈ ಎಲ್ಲಾ ವೆಚ್ಚಗಳನ್ನು ದೇವಸ್ಥಾನದ ವತಿಯಿಂದ ಭರಿಸಲಾಗುತ್ತಿದೆ.  ದೇವಸ್ಥಾನದ ವತಿಯಿಂದ ಹಣ ಸಂಗ್ರಹಣೆಗೆ ಯಾವುದೇ ವ್ಯಕ್ತಿಗಳನ್ನಾಗಲಿ, ಸಂಫಸಂಸ್ಥೆಗಳನ್ನಾಗಲಿ ನಿಯೋಜಿಸಿರುವುದಿಲ್ಲ.  ಆದರೂ ನ. ೨೫ ರಂದು ಜರುಗಲಿರುವ ಕಾರ್ತೀಕ ದೀಪೋತ್ಸವ ಸಂಬಂಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹೆಸರಿನಲ್ಲಿ ಕೆಲವರು ಹಣ ಸಂಗ್ರಹಣೆ ಮಾಡುತ್ತಿರುವುದಾಗಿ ಆರೋಪಗಳು ಕೇಳಿ ಬಂದಿರುತ್ತದೆ.  ಭಕ್ತಾಧಿಗಳು ಹಾಗೂ ಗ್ರಾಮಸ್ಥರು ಯಾರ ಕೈಯಲ್ಲಿಯು ಹಣವನ್ನಾಗಲಿ ಅಥವಾ ವಸ್ತು ರೂಪದಲ್ಲಿ ಕಾಣಿಕೆಗಳನ್ನಾಗಲಿ ಕೊಡದೆ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳ ಕಛೇರಿಯಲ್ಲಿ ಕೊಟ್ಟು ಸೂಕ್ತ ರಸೀದಿ ಪಡೆಯಬೇಕು.  ದೇವಸ್ಥಾನದ ಹೆಸರಿನಲ್ಲಿ ಯಾವುದೇ ವ್ಯಕ್ತಿಗಳಾಗಲಿ ಅಥವಾ ಸಂಸ್ಥೆಗಳಿಂದಾಗಲಿ ದೇಣಿಗೆ ಸಂಗ್ರಹಿಸುತ್ತಿರುವುದು ಕಂಡುಬಂದಲ್ಲಿ   ದಾಖಲೆ ಸಹಿತ ಲಿಖಿತ ದೂರನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸುವಂತೆ   ತಿಳಿಸಲಾಗಿದೆ. 

Leave a Reply