ಅರಿವಿನಯಾನದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು

 ತಾಲೂಕಿನ ಬಸಾಪಟ್ಟಣ ಗ್ರಾಮದ ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ಕ್ರಾಂತಿಕಾರಿ ಯುವಜನ ಸಂಘ ಹಮ್ಮಿಕೊಂಡಿದ್ದ ಅರಿವಿನಯಾನ ವಿಚಾರ ಸಂಕಿರಣ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಅರಿವಿನೆಡೆಗೆ ಕರೆದೊಯ್ಯಿತು ಎಂದು ಕ್ರಾಂತಿಕಾರಿ ಯುವಜನ ಸಂಘದ ತಾಲೂಕ ಅಧ್ಯಕ್ಷರಾದ ಹುಸೇನ್‌ಬಾಷಾರವರು ತಿಳಿಸಿದರು. 
ಅರಿವಿನಯಾನದಲ್ಲಿ ಉಪನ್ಯಾಸಕರಾಗಿ ಮಾತನಾಡಿದ  ಸೆಲ್ವರಾಜ್ ಉಪನ್ಯಾಸಕರು, ವಿದ್ಯಾ

ರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎಂಬುದರ ಕುರಿತಾದ ಮಾಹಿತಿ ನೀಡಿದರು. ಅದೇ ರೀತಿ ಚಿಂತಕರಾದ ಅಲ್ಲಾಗಿರಿರಾಜ್ ಮಾತನಾಡಿ, ಪರೀಕ್ಷೆಗಳು ನಿಮ್ಮ ಜ್ಞಾನವನ್ನು ಅಳೆಯುವ ಮಾಪಕವಲ್ಲ, ಆದರೆ ನಿಮ್ಮನ್ನು ಮುಂದಿನ ತರಗತಿ ಕೊಂಡೊಯ್ಯುವ ಒಂದು ಪ್ರಕ್ರಿಯೆ ಮಾತ್ರ ಹಾಗಾಗಿ ವಿದ್ಯಾರ್ಥಿ ಪರೀಕ್ಷೆಗಳನ್ನ ಪ್ರೀತಿಯಿಂದ ಸ್ವಾಗಸಿಬೇಕು ಎಂದರು.

ವೇದಿಕೆಯ ಅಧ್ಯಕ್ಷತೆವಹಿಸಿದಂತ ಶಾಲೆಯ ಮುಖ್ಯಗುರುಗಳಾದ ದಯಾನಂದಬಾಬುರವರು ಮಾತನಾಡಿ, ಗ್ರಾಮೀಣ ಭಾಗದ ಶೈಕ್ಷಣಿಕ ಮಟ್ಟ ಹೆಚ್ಚಾಗಬೇಕಾದರೆ ಆ ಭಾಗದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಬಹಳ ಪ್ರಮುಖವಾಗಿರುತ್ತದೆ. ಅಲ್ಲದೇ ಗ್ರಾಮದ ಯುವಜನತೆ ಮತ್ತು ನಾಗರೀಕರು ಕೂಡ ಈ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಾಗ ಮಾತ್ರ ಗ್ರಾಮೀಣ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ರಾಂತಿಕಾರಿ ಯುವಜನ ಸಂಘದ ಉಪಾಧ್ಯಕ್ಷರಾದ ಮಹ್ಮದ್‌ರಫಿ, ಟಿ.ರಾಘವೇಂದ್ರ ಮುತ್ತಣ್ಣ, ಖಾದರ್‌ಬಾಷಾ, ಐಸಾ ವಿದ್ಯಾರ್ಥಿ ಸಂಘಟನೆಯ ಚಂದ್ರಶೇಖರ್, ರಾಜು, ರುದ್ರೇಶ, ಬಸವರಾಜ್, ಮಲ್ಲನಗೌಡ, ಶಿವಮೂರ್ತಿ ಮತ್ತಿತರರು ಭಾಗವಹಿಸಿದ್ದರು. ಮತ್ತು ಸೈದಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply