ಕರ್ನಾಟಕ ಮುಕ್ತ ಶಾಲೆ ಕೆ.ಓ.ಎಸ್. ಪರೀಕ್ಷೆಯ ಫಲಿತಾಂಶ

ಬೆಂಗಳೂರು, ಫೆಬ್ರವರಿ 26  : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಫೆಬ್ರವರಿ-2015 ರ ಮಾಹೆಯಲ್ಲಿ ನಡೆಸಿದ ಕರ್ನಾಟಕ ಮುಕ್ತ ಶಾಲೆ ಕೆ.ಓ.ಎಸ್. ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 2-3-2015 ರಂದು ಬೆಳಿಗ್ಗೆ 11-00 ಗಂಟೆಗೆ ರಾಜ್ಯದ ಎಲ್ಲಾ ಕಲಿಕಾ ಕೇಂದ್ರಗಳಲ್ಲಿ ಪ್ರಕಟಿಸಲು ಕರ್ನಾಟಕ ಮುಕ್ತ ಶಾಲೆ-ಕೆ.ಓ.ಎಸ್. ಕಲಿಕಾ ಕೇಂದ್ರಗಳ ಸಮನ್ವಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಿರ್ದೇಶಕರು (ಇತರೆ ಪರೀಕ್ಷೆಗಳು) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error