ಸಾಯಿ ಭಿಕ್ಷಾ ಕೇಂದ್ರದಿಂದ ನಿರಂತರ ಸಾಮಾಜಿಕ ಸೇವೆ-ಲಕ್ಷ್ಮೀಶ್ರೀನಿವಾಸ ಗುರೂಜಿ

ಕೊಪ್ಪಳ, ಏ. ೧೨. ಕೊಪ್ಪಳ ಸೇರಿದಂತೆ ರಾಜ್ಯದ ಪ್ರತಿ ಹಳ್ಳಿಯಲ್ಲೂ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವತಿಯಿಂದ ನಿರಂತರ ಸಾಮಾಜಿಕ ಸೇವೆ ಮಾಡಲಾಗುವದು ಎಂದು ಕೇಂದ್ರದ ಸಂಸ್ಥಾಪಕರು, ಮುದ್ರಾ ರಹಸ್ಯ ಖ್ಯಾತಿಯ ಮುದ್ರಾ ರತ್ನ ಶ್ರೀ ಲಕ್ಷ್ಮೀಶ್ರೀನಿವಾಸ ಗುರೂಜಿ ಹೇಳಿದರು.
ಅವರು ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರ, ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಮತ್ತು ಶಿಫಾ ಹೋಮಿಯೋಪಥಿ ಕ್ಲಿನಿಕ್ ದಂತ ಚಿಕಿತ್ಸಾಲಯ ವತಿಯಿಂದ ಇಂದು ಕೊಪ್ಪಳ ನಗರದ ಕವಲೂರ ಓಣಿಯ ಬಸವಣ್ಣ ಗುಡಿ ಹತ್ತಿರವಿರುವ ಶಿಫಾ ಕ್ಲಿನಿಕ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ, ಹೊಮಿಯೋಪಥಿ ಚಿಕಿತ್ಸಾ ಹಾಗೂ ಸಲಹಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅದೇ ರೀತಿ ರಾಜ್ಯದ ವಿವಿಧೆಡೆ ಅನೇಕ ಯಾಗಗಳ ಮೂಲಕ ಪ್ರತಿಯೊಬ್ಬರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜೊತೆಗೆ ಪ್ರತಿಯೊಬ್ಬರೂ ಸುಖವಾಗಿ ಜೀವಿಸಲು ಬೇಕಾಗಿರುವ ನೆಮ್ಮದಿಯ ಬದುಕನ್ನು ಒದಗಿಸಲು ಶ್ರಮಿಸಲಾಗುವದು. ಮೇ ೩ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಒಂದು ಲಕ್ಷ ಜನರನ್ನು ಸೇರಿಸಿ ಉಚಿತವಾಗಿ ಮಹಾ ಪ್ರತ್ಯಂಗಿರ ಯಾಗವನ್ನು ಮಾಡುವ ಮೂಲಕ ಜನರಿಗೆ ಆಗುತ್ತಿರುವ ಮಾಟ ಮಂತ್ರಗಳ ಕಾಟಗಳಿಂದ ಮುಕ್ತಿ ನೀಡಲಾಗುವದು, ಪ್ರತಿಯೊಬ್ಬರಿಗೂ ಧಾರ್ಮಿಕ ಶಕ್ತಿಯನ್ನು ನೀಡುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆವಹಿಸಿ ಮಾತನಾಡಿ, ನಗರದಲ್ಲಿ ಅನೇಕ ರೀತಿಯ ಮುಂದುವರೆದ ಆರೋಗ್ಯ ಸೇವೆಯ ಅಗತ್ಯವಿದೆ, ಹೆಚ್ಚು ಹೆಚ್ಚು ಆಸ್ಪತ್ರೆಗಳು ಇಲ್ಲಿಯೇ ಆಗಬೇಕು, ಬಡವರಿಗೆ ಅನುಕೂಲವಾಗಬೇಕು ಜೊತೆಗೆ ಈ ರೀತಿಯ ಉಚಿತ ಆರೋಗ್ಯ ಶಿಬಿರಗಳ ಮೂಲಕ ಮಾಡುತ್ತಿರುವ ಸೇವೆ ಶ್ಲಾಘನೀಯವೆಂದ ಅವರು, ಅಂಥಹ ಕೆಲಸಗಳಿಗೆ ನಿರಂತರ ಸಹಕಾರ ನೀಡುವದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಮಾಜಿ ಹಂಗಾಮಿ ಅಧ್ಯಕ್ಷ ಅಮ್ಜದ್ ಪಟೇಲ್, ನಗರಸಭೆ ಮಾಜಿ ಸದಸ್ಯರಾದ ಮಾನ್ವಿ ಪಾಶಾ, ಡಾ|| ಉಪೇಂದ್ರ, ಜ್ಯೋತಿ ಗೊಂಡಬಾಳ ಇತರರು ಇದ್ದರು. ಇದೇ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಹಾಘೂ ಪೌರಾಯುಕ್ತ ರಮೇಶ ಪಟ್ಟೇದಾರರನ್ನು ಸನ್ಮಾನಿಸಲಾಯಿತು.
ವೈದ್ಯರಾದ ಡಾ|| ಎಸ್. ಕೆ. ರಾಜೂರ, ಡಾ|| ಜಾಸ್ಮೀನ್ ರಾಜೂರ ಭಾಗವಹಿಸಿ ಸಲಹೆ ನೀಡುವದರ ಜೊತೆಗೆ ಆರೋಗ್ಯ ಪರೀಕ್ಷಿಸಿ ಚಿಕಿತ್ಸೆ ನೀಡಿದರು. ಸಲೀಂ ಕುದರಿಮೋತಿ, ದೇವರಾಜ ಬಡಿಗೇರ ಇತರರು ಆಋಓಗ್ಯ ಪರೀಕ್ಷಿಸಿದರು. ಕಾರ್ಯಕ್ರಮ ಸಂಘಟಕ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಿಂಹ ಸ್ವಾಗತಿಸಿದರು, ಸಾಹಿತ್ಯ ಗೊಂಡಬಾಳ ಪ್ರಾರ್ಥಿಸಿದರು, ಸಂತೋಷ ನಿರೂಪಿಸಿದರು, ಆನಂದ ಗೊಂಡಬಾಳ ವಂದಿಸಿದರು.

Related posts

Leave a Comment