ತಾಲೂಕಾ ಕ.ಸಾ.ಪ ಅಧಿಕಾರ ಪದಗ್ರಹಣ ಸಮಾರಂಭ

ಕೊಪ್ಪಳ: ಕೊಪ್ಪಳ ತಾಲೂಕಾ ಕ.ಸಾ.ಪ ಅಧಿಕಾರ ಪದಗ್ರಹಣ ಸಮಾರಂಭವು ಜ್ಞಾನಬಂಧು ಪ್ರಾಥಮಿಕ ಶಾಲೆ ಭಾಗ್ಯನಗರದಲ್ಲಿ ದಿ ೧೬  ಶುಕ್ರವಾರ ಸಂಜೆ ೫ ಕ್ಕೆ ನೆರವೇರಿತು. ನೂತನ  ತಾಲೂಕಾ  ಕ.ಸಾ.ಪ ಘಟಕವನ್ನು ತಾ.ಪಂ ಸದಸ್ಯರು ಹಾಗೂ ಸ್ಥಳೀಯರಾದ  ದಾನಪ್ಪ ಕವಲೂರ ಉದ್ಘಾಟಿಸಿ ತಾಲೂಕಿನಾಧ್ಯಂತ  ಉತ್ತಮ  ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಈ ಪರಿಷತ್ತು  ಮಾಡುವಂತಾಗಲಿ ಎಂದರು. ವೇದಿಕೆಯಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ವೀರಣ್ಣ ನಿಂಗೋಜಿಯವರು ನೂತನ ಅಧ್ಯಕ್ಷ ಶಿ.ಕಾ.ಬಡಿಗೇರರಿಗೆ ಪರಿಷತ್ ಧ್ವಜ ಹಸ್ತಾಂತರ ಮಾಡಿದರು. ನಂತರ ಅಧ್ಯಕ್ಷ ಶಿ.ಕಾ.ಬಡಿಗೇರ ಮಾತನಾಡಿ ಎಲ್ಲರ ಸಹಕಾರದಿಂದ ನಿರೀಕ್ಷೆಗೂ ಮೀರಿ  ಕಾರ್ಯ ನಿರ್ವಹಿಸುವೆ ಎಂದರು. ಅತಿಥಿಗಳಾಗಿ ಉಪನ್ಯಾಸಕ ಡಿ.ಎಂ.ಬಡಿಗೇರ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಅಕ್ಬರ್ ಕಾಲಿಮಿರ್ಚಿ ಮತ್ತು  ಶ್ರೀ ಶಿವಾನಂದ ಮೇಟಿ,  ಜಿಲ್ಲಾ ಕ.ಸಾ.ಪ ಕೋಶಾಧ್ಯಕ್ಷರಾದ  ಆರ್.ಎಸ್. ಸರಗಣಾಚಾರಿ ಆಗಮಿಸಿ ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.  ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ವೀರಣ್ಣ ನಿಂಗೋಜಿ ವಹಿಸಿ ನೂತನ ಅಧ್ಯಕ್ಷರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಪದಾಧಿಕಾರಿಗಳನ್ನು ಪ್ರೀತಿ ವಿಶ್ವಾಸಕ್ಕೆ ತಂದುಕೊಂಡು ಇನ್ನು ೨ ವರ್ಷದ ಅವಧಿಯಲ್ಲಿ ಅವರು ಸಮರ್ಥವಾಗಿ ಪರಿಷತ್ತನ್ನು ಮುನ್ನೆಡೆಸಲಿ ಎಂದರು. ಸಭೆಯಲ್ಲಿ ಎಚ್.ಎಸ್.ಪಾಟೀಲ, ಅಲ್ಲಮಪ್ರಭು ಬೆಟ್ಟದೂರ, ಹನುಮಂತಪ್ಪ ಅಂಡಗಿ, ಅರುಣಾನರೇಂದ್ರ ಮಾತನಾಡಿದರು.ಸಾಹಿತ್ಯಾಸಕ್ತರು ಭಾಗವಹಿಸಿದ್ದರು.  ಸ್ವಾಗತ ಡಾ.ಪ್ರಕಾಶಬಳ್ಳಾರಿ, ವಂದನಾರ್ಪಣೆ ಕಿಶನ್ ಜಾಜು, ನಿರೂಪಣೆ ಮೈಲಾರಗೌಡ್ರ ಹೊಸಮನಿ ನೆರವೇರಿಸಿದರು. 

Leave a Reply