You are here
Home > Koppal News > ಡಿ. ೨೫ ರ ಸಂಜೆ ೪ ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ.

ಡಿ. ೨೫ ರ ಸಂಜೆ ೪ ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ.

ಕೊಪ್ಪಳ
ಡಿ. ೨೩ (ಕ ವಾ) ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ
ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. ೨೭ ರಂದು ಮತದಾನ ನಡೆಯಲಿದ್ದು,
ನಿಯಮದನ್ವಯ ಡಿ. ೨೫ ರಂದು ಸಂಜೆ ೪ ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ
ಅಂತ್ಯಗೊಳ್ಳಲಿದೆ.
     ಚುನಾವಣೆ ನಿಯಮದಂತೆ ಮತದಾನ ಮುಕ್ತಾಯದ ಅವಧಿಗಿಂತ ಪೂರ್ವದ
೪೮ ಗಂಟೆಗಳ ಅವಧಿಯೊಳಗೆ ಚುನಾವಣಾ ಬಹಿರಂಗ ಪ್ರಚಾರವನ್ನು ನಿಷೇಧಿಸಲಾಗಿದ್ದು, ಕೊಪ್ಪಳ
ಜಿಲ್ಲೆಯಲ್ಲಿ ಡಿ. ೨೫ ರಂದು ಸಂಜೆ ೪ ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ
ಅಂತ್ಯಗೊಳ್ಳಲಿದೆ.  ಎಲ್ಲ ರಾಜಕೀಯ ವ್ಯಕ್ತಿಗಳು, ಚುನಾವಣಾ ಅಭ್ಯರ್ಥಿಗಳು ಬಹಿರಂಗ
ಪ್ರಚಾರವನ್ನು ಡಿ. ೨೫ ರ ಸಂಜೆ ೦೪ ಗಂಟೆಗೆ ಅಂತ್ಯಗೊಳಿಸಿ, ಚುನಾವಣೆಯನ್ನು ಮುಕ್ತ ಹಾಗೂ
ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ
ಎಂ. ಕನಗವಲ್ಲಿ ಅವರು ಕೋರಿದ್ದಾರೆ.

Leave a Reply

Top