You are here
Home > Koppal News > ರಾಷ್ಟ್ರೀಯ ಪ್ರಶಸ್ತ್ತಿಗೆ ಕೊತ್ವಾಲ್ ಆಯ್ಕೆ:ಸಂಭ್ರಮಾಚರಣೆ

ರಾಷ್ಟ್ರೀಯ ಪ್ರಶಸ್ತ್ತಿಗೆ ಕೊತ್ವಾಲ್ ಆಯ್ಕೆ:ಸಂಭ್ರಮಾಚರಣೆ

ಕೊಪ್ಪಳ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡುವ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕರ ವಿಶೇಷ ವಿಭಾಗದಲ್ಲಿ ಜಿಲ್ಲೆಯ ಯಲಬುರ್ಗಾ ನಗರದ ನಂ.೧.ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಯಲಬುರ್ಗಾ ತಾಲೂಕ ಘಟಕದ ಗೌರವಾಧ್ಯಕ್ಷರಾದ ಮರ್ದಾನಸಾಬ ಕೊತ್ವಾಲ್‌ರವರನ್ನು ಆಯ್ಕೆ ಮಾಡಿರುವುದಕ್ಕೆ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು ಹರ್ಷ ವ್ಯಕ್ತಪಡಿಸಿ,ಅಭಿನಂದನೆಸಲ್ಲಿಸುತ್ತಾ ನಗರದ ಬಿ.ಆರ್.ಸಿ.ಆವರಣದಲ್ಲಿ ಸಹಿಯನ್ನು ಹಂಚುವುದರ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.
   ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿಯ ವಿಜೇತರಾದ ಮರ್ದಾನಸಾಬ ಕೊತ್ವಾಲ್,ಲಿಂಗರಾಜ ಬಿರಾದಾರ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲರಾದ ಭರಮಪ್ಪ ಕಟ್ಟಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಮಹೇಶ ಆರೇರ,ಬಿ.ಆರ್.ಸಿ.ಯವರಾದ.ಕೆ.ಪ್ರಕಾಶ,ಬಿ.ಆರ್.ಪಿ.ವಿಜಯಕುಮಾರ ಕುರುಗೋಡ,ಎಮ್.ಎಚ್.ಕುರಿ,ಶಿಕ್ಷಕರಾದ ಕೃಷ್ಣಮೂರ್ತಿ,ಅನ್ನಪೂರ್ಣಮ್ಮ ಅಸ್ಕಿ ,ಬೆನ್ನಾಳಪ್ಪ ದೊಡ್ಡಮನಿ ಮುಂತಾದವರು ಹಾಜರಿದ್ದರು.
ಪೋಟೊ: ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಮರ್ದಾನಸಾಬ ಕೊತ್ವಾಲ್‌ರವರಿಗೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ಸಿಹಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

Leave a Reply

Top