You are here
Home > Koppal News > ೮ ರಂದು ಶ್ರೀ ಯಾಜ್ಞವಲ್ಕ್ಯ ಗುರುಗಳ ಜಯಂತ್ಯೋತ್ಸವ

೮ ರಂದು ಶ್ರೀ ಯಾಜ್ಞವಲ್ಕ್ಯ ಗುರುಗಳ ಜಯಂತ್ಯೋತ್ಸವ

 ನಗರ ಪ್ರಶಾಂತ ಬಡಾವಣೆಯ ಶ್ರೀ ವಿಠ್ಠಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಜಯಂತ್ಯೋತ್ಸವ ದಿ. ೮ ರಂದು ಜರುಗಲಿದೆ
ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಯಂತ್ಯೋತ್ಸವದ ಅಂಗವಾಗಿ ಈಗಾಗಲೇ ಪ್ರತಿದಿನ ಸಂಜೆ ಈಶಾವ್ಯಾಸೋಪನಿಷತ್ ಪ್ರವಚನ ಜರುಗಲಿದೆ.
ಶನಿವಾರ ದಿ. ೭ ರಂದು ಜೇಷ್ಠ ಶುದ್ಧ ನವಮಿ ದಿ. ೭ ರಂದು ಸಂಜೆ ೫ಕ್ಕೆ ಶ್ರೀ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರ ಮೆರವಣಿಗೆ ಜರುಗಲಿದ್ದು, ದಿ. ೮ ರಂದು ರವಿವಾರ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸರ್ವರೂ ಆಗಮಿಸಿ ಯಶಸ್ವಿಗೊಳಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಜಹಾಗೀರದಾರ  ತಿಳಿಸಿದ್ದಾರೆ.

Leave a Reply

Top