ರಾಷ್ಟ್ರಪತಿ ಪೋಲೀಸ್ ಪದಕ ವಿಜೇತ ಭೋಸಲೆರವರಿಗೆ ಸನ್ಮಾನ ಕಾರ್ಯಕ್ರಮ

ರಾಷ್ಟ್ರಪತಿ ಪೋಲೀಸ್ ಪದಕ ವಿಜೇತ  ವಿಲಾಸ.ಹೆಚ್.ಭೋಸಲೆರವರಿಗೆ ಸನ್ಮಾನ ಕಾರ್ಯಕ್ರಮ 
ಕೊಪ್ಪಳ :-  ಜಿಲ್ಲೆಯ ಕರ್ನಾಟಕ ಲೋಕಾಯುಕ್ತ  ಇಲಾಖೆಯ ಹೆಡ್‌ಕಾನ್ಸ್‌ಟೇಬಲ್ ಆಗಿರುವ   ವಿಲಾಸ್.ಹೆಚ್.ಬೋಸಲೆ ರವರಿಗೆ ತಮ್ಮ ಸೇವಾ ಅವಧಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವುದರಿಂದ ೨೦೧೩ ನೇ ಸಾಲಿನ ಗಣರಾಜ್ಯೋತ್ಸವದಂದು ಭಾರತ ಸರ್ಕಾರದ ಮಾನ್ಯ ಘನವೆತ್ತ ರಾಷ್ಟ್ರಪತಿಗಳ  “ರಾಷ್ಟ್ರಪತಿ ಪೋಲೀಸ್” ಪದಕ ವಿಜೇತರಾದ  ವಿಲಾಸ.ಹೆಚ್.ಭೋಸಲೆರವರಿಗೆ ದಿನಾಂಕ ೨೪ ರಂದು ಸಾಯಂಕಾಲ ೦೫ ಗಂಟೆಗೆ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಮರಾಠ ಸಮಾಜದ ವತಿಯಿಂದ ಕರ್ನಾಟಕ ಲೋಕಾಯುಕ್ತ ಇಲಾಖೆ ಕೊ
ಪ್ಪಳ ಕಛೇರಿಯಲ್ಲಿ ಇವರಿಗೆ ಸನ್ಮಾನಿಸಿದರು.   
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆ ಡಿ.ಡಿ.ಮಾಳಗಿ, ಡಿ.ಎಸ್.ಪಿ. ಕರ್ನಾಟಕ ಲೋಕಾಯುಕ್ತ ಕೊಪ್ಪಳ ಹಾಗೂ ಸಿಬ್ಬಂದಿ ವರ್ಗದವರು  ಕೊಪ್ಪಳ, ಕಿನ್ನಾಳ ಗ್ರಾಮದ ಮರಾಠ ಸಮಾಜದ ಅಧ್ಯಕ್ಷರಾದ ದೇವಪ್ಪ ದಳವೆ, ಮಲ್ಲಪ್ಪ ದಳವೆ, ರಾಮಪ್ಪ ದೊಡ್ಡಮನಿ, ಲಕ್ಷ್ಮಪ್ಪ ಆರೇರ, ರಮೇಶ ಘೋರ್ಪಡೆ, ಶಿವಾಜಿರಾವ್ ಘೋರ್ಪಡೆ, ನಾಗರಾಜ ಘಾಟಗೆ,  ರಾಜು ಆರೇರ, ಗೋಪಾಲಪ್ಪ, ಪವಾರ್, ಕೃಷ್ಣಪ್ಪ ಆರೇರ, ಹನುಮಂತಪ್ಪ ಇಂಗಳಿ ಮರಾಠ ಜನಾಂಗದ ಪರವಾಗಿ ಹಾಗೂ ನಾಗರೀಕರ ಬಂಧುಗಳ ಅಭಿನಂದಿಸಿ ಸನ್ಮಾನಿಸಿದರು. 

Related posts

Leave a Comment