fbpx

ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆ ನಿಷೇಧಾಜ್ಞೆ ಜಾರಿ.

ಕೊಪ್ಪಳ,
ಜ.೨೯ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಜ.೩೦ ಹಾಗೂ ೩೧ ರಂದು ೦೬ ಪರೀಕ್ಷಾ
ಕೇಂದ್ರಗಳಲ್ಲಿ ನಡೆಯಲಿರುವ ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆ ಸುಗಮ ಹಾಗೂ
ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ
ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
    
ಜಿಲ್ಲೆಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಪ್ಪಳ ಪರೀಕ್ಷಾ ಕೇಂದ್ರದಲ್ಲಿ ಜ.೩೦
ರಂದು ಮಧ್ಯಾಹ್ನ ೦೨.೩೦ ರಿಂದ ೦೪.೩೦ ಗಂಟೆಯವರೆಗೆ ಹಾಗೂ ಜ.೩೧ ರಂದು ಬೆಳಿಗ್ಗೆ ೧೦.೩೦
ರಿಂದ ೧೨.೩೦ ಗಂಟೆಯವರೆಗೆ ಹಾಗೂ ಅದೇ ದಿನ ಮಧ್ಯಾಹ್ನ ೦೨.೩೦ ರಿಂದ ೦೪.೩೦
ಗಂಟೆಯವರೆಗೆ. ಉಳಿದಂತೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ, ಸರ್ಕಾರಿ
ಪದವಿ ಪೂರ್ವ ಕಾಲೇಜು ಭಾಗ್ಯನಗರ, ಬಿ.ಎನ್.ಆರ್.ಕೆ ಪದವಿ ಪೂರ್ವ ಕಾಲೇಜು ಕೊಪ್ಪಳ,
ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಕೊಪ್ಪಳ ಮತ್ತು ಎಸ್.ಎಫ್.ಎಸ್ ಆಂಗ್ಲ ಮಾಧ್ಯಮ
ಶಾಲೆ ಕೊಪ್ಪಳದ ಪರೀಕ್ಷಾ ಕೇಂದ್ರಗಳಲ್ಲಿ ಜ.೩೧ ರಂದು ಮಧ್ಯಾಹ್ನ ೦೨.೩೦ ರಿಂದ ೦೪.೩೦
ಗಂಟೆಯವರೆಗೆ ಸ್ಟಾಫ್ ನರ್ಸಸ್ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳನ್ನು
ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ
ಹಿತದೃಷ್ಠಿಯಿಂದ  ೦೬ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀಟರ್ ವ್ಯಾಪ್ತಿಯಲ್ಲಿ
ಪರೀಕ್ಷಾ ಅವಧಿಯಲ್ಲಿ ಸಿ.ಆರ್.ಪಿ.ಸಿ ೧೯೭೩ ಕಲಂ ೧೪೪ರನ್ವಯ ನಿಷೇಧಾಜ್ಞೆ
ಜಾರಿಗೊಳಿಸಲಾಗಿದೆ.  ನಿಷೇಧಾಜ್ಞೆಯನ್ವಯ, ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ.
ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್‌ಟಿಡಿ, ಮೊಬೈಲ್, ಜೆರಾಕ್ಸ್, ಟೈಪಿಂಗ್
ಮುಂತಾದವುಗಳನ್ನು ನಿಷೇಧಿಸಲಾಗಿದೆ.  ಅಲ್ಲದೆ ಈ ವ್ಯಾಪ್ತಿಯಲ್ಲಿ ಜನರು
ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಸಹ ನಿರ್ಬಂಧಿಸಲಾಗಿದೆ ಎಂದು
ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!