ನಗರಸಭೆಯಿಂದ ಸಹಾಯಧನ : ಅರ್ಜಿ ಆಹ್ವಾನ

 ಕೊಪ್ಪಳ ನಗರಸಭೆಯಿಂದ 2012-13ನೇ ಸಾಲಿನ ನಗರಸಭೆ ನಿಧಿ ಶೇ.3 ರ ಅನುದಾನದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಅಂಗವಿಕಲರಿಗೆ ಸ್ವಂತ ಮನೆ ಇದ್ದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಸಹಾಯಧನ ಒದಗಿಸಲು  ರೂ.80,000 ಗಳಿಗೆ ಒಟ್ಟು 4 ಫಲಾನುಭವಿಗಳಿಗಾಗಿ ಕ್ರಿಯಾ ಯೋಜನೆಗೆ ಮಂಜೂರಾತಿ ಪಡೆದಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿದಾರರು ನಗರವಾಸಿಯಾಗಿರಬೇಕು, ಅರ್ಜಿದಾರರ ಹೆಸರಿನಲ್ಲಿರುವ ಆಸ್ತಿಯ ಚಾಲ್ತಿ ಸಾಲಿನ ಫಾರಂ ನಂ.3, ರೇಷನ್ ಕಾರ್ಡ್, ಆಧಾರ ಕಾರ್ಡ್, ಓಟರ್ ಐಡಿ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನವೀಕರಿಸಿದ ಅಂಗವೈಕಲ್ಯ ದೃಢೀಕರಣ ಪ್ರಮಾಣ ಪತ್ರ, ಈ ಎಲ್ಲಾ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಜೂ.23 ರೊಳಗಾಗಿ ನಗರಸಭೆ ಕಾರ್ಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 08539-230192  ಸಂಪರ್ಕಿಸಬಹುದಾಗಿದೆ  

Leave a Reply