ಇಟಗಿ ಉತ್ಸವ : ಡಿ. ೨೪ ರ ಸಾಂಸ್ಕೃತಿಕ ಕಾರ್ಯಕ್ರಮಗಳು

ಕೊಪ್ಪಳ ಡಿ. : ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತಿರುವ ಇಟಗಿ ಉತ್ಸವದ ಅಂಗವಾಗಿ ಮಹಾದೇವ ದಂಡನಾಯಕ ವೇದಿಕೆಯಲ್ಲಿ ಡಿ. ೨೪ ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧-೩೦ ರವರೆಗೆ ಹಾಗೂ ಸಂಜೆ ೬-೩೦ ರಿಂದ ರಾತ್ರಿ ೧೧-೩೦ ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
  ಅಂದು ಬೆಳಿಗ್ಗೆ ಮಂಗಳೂರಿನ ಹನುಮಂತಪ್ಪ ಭಜಂತ್ರಿ ಅವರಿಂದ ಕ್ಲಾರಿಯೋನೆಟ್ ವಾದನ, ಸೋಮನಗೌಡ ಹಕ್ಕಂಡಿ ಅವರಿಂದ ಸುಗಮ ಸಂಗೀತ, ಬಿನ್ನಾಳದ ಬಸವೇಶ್ವರ ಕಲಾಸಂಸ್ಕೃತಿ ಭಜನಾ ಮಂಡಳಿಯಿಂದ ಶಿವಭಜನೆ, ಕಲ್ಲೂರು ಮಹಾಂತೇಶ ಶಾಸ್ತ್ರಿಗಳಿಂದ ತತ್ವಪದ, ಕನಕಗಿರಿಯ ಯಮನೂರಪ್ಪ ಬಂಡಿ ಅವರಿಂದ ವಚನ ಸಂಗೀತ, ಸಂಜಯ್ ಅಂದ್ರಾಳು ಅವರಿಂದ ಹಿಂದೂಸ್ತಾನಿ ಗಾಯನ, ಬೆಂಗಳೂರಿನ ಅಜಯ್ ವಾರಿಯರ್, ದಿವ್ಯರಾಘವನ್ ಮತ್ತು ಸಂಗಡಿಗರಿಂದ ಚಲನಚಿತ್ರ ಗೀತೆಗಳು, ಮಾನ್ವಿಯ ವಿರುಪಾಕ್ಷಯ್ಯ ವಂದಲಿ ಅವರಿಂದ ದಾಸವಾಣಿ, ಇಲಕಲ್‌ನ ಕಿರಣ್ ಬಿಜ್ಜಲ ರಿಂದ ವಚನ ಗಾಯನ, ಇಟಗಿಯ ಓಂ ಗುರೂಜಿ ಯುವಕ ಸಂಘದಿಂದ ಕೋಲಾಟ, ಗಂಗಾಧರ ಜಿ ಅರಳಕಟ್ಟಿ ಅವರಿಂದ ಭಕ್ಗಿ ಸಂಗೀತ, ಗಂಗಾವತಿಯ ಜಲೀಲ ಪಾಷಾ ರಿಂದ ತಬಲಾ ಸೋಲೊ, ಬೆಳಗಾವಿಯ ಆನಂದ ಹರದೊಳ್ಳಿ ಚಂದರಗಿ ಅವರಿಂದ ವಚನ ಗಾಯನ ಮತ್ತು ತಳಕಲ್‌ನ ಫಕುರುದ್ದೀನ್ ಮತ್ತು ತಂಡದಿಂದ ರಿವಾಯತ್ ಪದಗಳ ವೈವಿಧ್ಯಯಮಯ ಕಾರ್ಯಕ್ರಮಗಳು ಜರುಗಲಿವೆ.
  ಅಂದು ಸಂಜೆ ೬-೩೦ ರಿಂದ ಪುನಃ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದ್ದು, ಅಕ್ಷತಾ ಬಣ್ಣದಭಾವಿ ಅವರಿಂದ ಸುಗಮ ಸಂಗೀತ, ಸುಮಿತ್ರ ಅಗಳಕೇರಿ ತಂಡದಿಂದ ಗೀಗೀ ಪದಗಳು, ಬೆಂಗಳೂರಿನ ಆರಾಧನಾ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿಂದ ನೃತ್ಯ ರೂಪಕ- ಸೀತಾ ಕಲ್ಯಾಣ, ಬೆಂಗಳೂರಿನ ದೇವೇಂದ್ರಕುಮಾರ ಮುಧೋಳ ಅವರಿಂದ ದಾಸವಾಣಿ, ಕೊಪ್ಪಳದ ಕೂಪಳಗಡ ಬಹಾದ್ದೂರ ಬಂಡ ಸೇವಾ ಟ್ರಸ್ಟ್‌ನಿಂದ ಲಂಬಾಣಿ ನೃತ್ಯ, ಎಸ್.ವಿ. ಪಾಟೀಲ ಗುಂಡೂರು, ವೈಶಂಪಾಯನ ಕೊಪ್ಪಳ, ಡಾ. ಬಸವರಾಜ ಬೆಣ್ಣೆ ಅವರಿಂದ ನಗೆ ಹಬ್ಬ, ಮೊಹ್ಮದ್ ಹುಸೇನ ಸುಳೇಕಲ್ ಅವರಿಂದ ಕನ್ನಡ ಕವಾಲಿ, ಓಜನಹಳ್ಳಿಯ ಶಿವಮೂರ್ತಿ ಮೇಟಿ ಅವರಿಂದ ಗೀತ ರೂಪಕ, ಧಾರವಾಡದ ಲೋಕೇಶ ಭಜಂತ್ರಿ ಅವರಿಂದ ತಬಲಾ ಸೋಲೊ, ಕೊಪ್ಪಳದ ರಿದಮ್ ಡ್ಯಾನ್ಸ್ ಅಕಾಡೆಮಿಯಿಂದ ಅಘೋರಿ ನೃತ್ಯ, ಬಾಗಲಕೋಟೆಯ ಎಮ್.ಎಚ್. ಬಡಿಗೇರ ರಿಂದ ಹಿಂದೂಸ್ತಾನಿ ಗಾಯನ, ಕುದರಿಮೋತಿಯ ಹನುಮಂತಕುಮಾರ ಮುಧೋಳರಿಂದ ಕೊಳಲು ವಾದನ, ಜೀವನಸಾಬ ಬಿನ್ನಾಳರಿಂದ ಜಾನಪದ ಗಾಯನ, ನವಲಿಯ ಮುರುಘೇಂದ್ರ ಹಿರೇಮಠರಿಂದ ಭಾವಗೀತೆಗಳು, ಗೌಡೇಶ ಪವಾರ ಅಂಧ ಕಲಾವಿದರಿಂದ ವಚನ ಸಂಗೀತ, ಸಿ.ವಿ. ಜಡಿಯವರ್ ಅವರಿಂದ ಜಾನಪದ ಗಾಯನ, ಧಾರವಾಡದ ಅಯ್ಯಪ್ಪಯ್ಯ ಹಲಗಲಿಮಠರಿಂದ ಹಿಂದೂಸ್ತಾನಿ ಗಾಯನ, ಬಸವರಾಜ ಬಣ್ಣದ ಅವರಿಂದ ದಾಸವಾಣಿ, ಮನ್ನಾಪುರದ ಸೂಪರ್ ಬುಡಾಕಾನ್ ಕರಾಟೆ ಕ್ಲಬ್ ಅವರಿಂದ ಕರಾಟೆ ಕಲೆಯ ಪ್ರದರ್ಶನ ನಡೆಯಲಿದ್ದು, ಅಂದು ರಾತ್ರಿ ೧೧-೨೦ ಗಂಟೆಗೆ ಇಟಗಿ ಹಾಗೂ ಮುಂಡರಗಿಯ ಹವ್ಯಾಸಿ ಕಲಾವೃಂದ ತಂಡದಿಂದ ರಕ್ತ ರಾತ್ರಿ ನಾಟಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
Please follow and like us:
error