ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲು ಸಹಕಾರಿ-ಪೂಜಾರ.

ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಲು  ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಹೇಳಿದರು.  ನಗರದ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನ ವಿಜ್ಞಾನವಸ್ತು ಪ್ರದರ್ಶನ ಮತ್ತು ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭ ಉದ್ಘಾಟಿಸಿದ ಅವರು
ಮೇಲಿನಂತೆ ಹೇಳಿದರು ಮುಂದುವರೆದು ಮಾತನಾಡಿದ ಅವರು ಮಗುವಿಗೆ ಉತ್ತಮ ಶಿಕ್ಷಣ ಒದಗಿಸಿ
ನಾಗರಿಕನನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಗುಣ ಮಟ್ಟದ ಶಿಕ್ಷಣ ನೀಡಿದಾಗ
ಪ್ರಜ್ಞಾವಂತ ಸಮಾಜ ನಿರ್ಮಾಣವಾಗಲಿದೆಎಂದು ಹೇಳಿದರು. ನಂತರ ಮಾತನಾಡಿದ  ವಿಜ್ಞಾನಶಿಕ್ಷಕ
ಮಹಾತೇಶ ಚಿನ್ನಿನಾಯ್ಕರ್ ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನ ದಿಂದ  ಮಕ್ಕಳಲ್ಲಿ
ಸಂಶೋಧನೆ ಗುಣ ಬೆಳೆಯುವುದು ಎಂದರು ಇನ್ನು ಕೆಲವೇ ದಿನಗಳಲ್ಲಿ ಕೊಪ್ಪಳದಲ್ಲಿ ವಿಜ್ಞಾನ
ಭವನ ಕಾರ್ಯಾರಂಭ ಮಾಡಲಿದೆ ಎಂದು ಇದೇ ಸಂದರ್ಬದಲ್ಲಿ ಹೇಳಿದರು.
Please follow and like us:
error