ಜು.೦೩ ರಂದು ಟಿಡಿಎಸ್ ಕುರಿತು ಬಳ್ಳಾರಿಯಲ್ಲಿ ಕಾರ್ಯಾಗಾರ.

ಕೊಪ್ಪಳ, ಜು.೦೨ – ಬಳ್ಳಾರಿಯ ಆದಾಯ ತೆರಿಗೆ ಇಲಾಖೆ ವತಿಯಿಂದ  ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲ ಕೋ-ಆಪರೇಟಿವ್ ಬ್ಯಾಂಕುಗಳ  ಅಧಿಕಾರಿಗಳಿಗೆ (ಡಿಡಿಓ) ಸೆಕ್ಷನ್ ೧೯೪ಎ ಇನ್‌ಕಾನ್ ಟೆಕ್ಸ್ಟ್ ಆಫ್ ಫೈನಾನ್ಸ್ ಬಿಲ್-೨೦೧೫, ಟಿಡಿಎಸ್ ವಿಷಯಗಳ ಕುರಿತು ಜು.೦೩ ರಂದು ಬೆ. ೧೦ ಗಂಟೆಗೆ ಒಂದು ದಿನದ ಕಾರ್ಯಾಗಾರವನ್ನು ಬಳ್ಳಾರಿಯ ಐ.ಸಿ.ಎ.ಐ ಭವನದ (ಸಿಎ ಇನ್‌ಸ್ಟಿಟ್ಯೂಟ್) ಅಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಿದೆ.
     ಬಳ್ಳಾರಿಯ ರಾಘವೇಂದ್ರ ಕಾಲೋನಿ, ಅಯ್ಯಪಸ್ವಾಮಿ ದೇವಸ್ಥಾನ ಬಳಿಯ ಐ.ಸಿ.ಎ.ಐ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಗಾರವನ್ನು ಬೆಂಗಳೂರಿನ ಆದಾಯ ತೆರಿಗೆ ಇಲಾಖೆ (ಟಿಡಿಎಸ್) ಯ ಕಮೀಷನರ್ ಅವರು ಉದ್ಘಾಟಿಸಲಿದ್ದಾರೆ. ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ ಕೋ-ಆಪರೇಟಿವ್ ಬ್ಯಾಂಕುಗಳ ಡಿಡಿಓಗಳು ಹಾಗೂ ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳುವಂತೆ ಬಳ್ಳಾರಿ ಆದಾಯ ತೆರಿಗೆ ಇಲಾಖೆ ಅಧಿಕಾರಿ (ಟಿಡಿಎಸ್) ಡಿ.ಪಾಂಡುರಂಗರಾವ್ ಕೋರಿದ್ದಾರೆ.

Leave a Reply