fbpx

ಹೊಸಪೇಟೆ ಇಂದಿಗೂ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ದುರಾದೃಷ್ಟಕರವೆಂದು ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೊಡಿಕೊಂಡರು.

ಹೊಸಪೇಟೆ- ಸಮೃದ್ಧ ನೈಸರ್ಗಿಕ ಸಂಪತ್ತು, ಉತ್ತಮ ಭೌಗೋಳಿಕ ಲಕ್ಷಣ, ಆಗಾಧವಾದ ಜಲರಾಶಿ ಹಾಗೂ ಸರ್ವ ಜನಾಂಗದವರು ಸೌಹಾರ್ಧಯುತವಾಗಿ ಬಾಳುತ್ತಿದ್ದು ಮಾದರಿ ನಗರವಾಗಲೂ ಎಲ್ಲಾ ಅರ್ಹತೆಯನ್ನೊಳಗೊಂಡ  ಹೊಸಪೇಟೆಯೂ  ಇಂದಿಗೂ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ದುರಾದೃಷ್ಟಕರವೆಂದು ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೊಡಿಕೊಂಡರು.
    ಅವರು ನಗರದ ರೋಟರಿ ಶಾಲೆಯಲ್ಲಿಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯಂಗವಾಗಿ ಇನ್ನರ್‌ವೀಲ್ ಕ್ಲಬ್ ಪ್ರೌಢಶಾಲಾ ಮಕ್ಕಳಿಗಾಗಿ ‘ನನ್ನ ಕನಸಿನ ಹೊಸಪೇಟೆ’ ವಿಷಯವಾಗಿ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಮಾತನಾಡುತ್ತಾ ವಿಜಯನಗರ ಅರಸ  ಕೃಷ್ಣದೇವರಾಯ ತನ್ನ ತಾಯಿ ಸ್ಮರಣಾರ್ಥ ನಾಗಲಾಪುರವನ್ನು ಸ್ಥಾಪಿಸಿದ ಅದರ ಅಂಗ ಪಟ್ಟಣವಾದ ನವನಗರವನ್ನ ಹೊಸಪೇಟೆಯೆಂದು ಕರೆಯಲ್ಪಟ್ಟಿತ್ತು, ಶತ ಶತಮಾನಗಳ ಇತಿಹಾಸವಿರುವ ಹೊಸಪೇಟೆಗೆ ವ್ಯವಸ್ಥಿತ ಒಳಚರಂಡಿ, ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಶೌಚಾಲಯ,  ಸುಸಜ್ಜಿತವಾದ ಆಸ್ಪತ್ರೆ ಇಲ್ಲದೇ ಇರುವುದು ಸೋಜಿಗದ  ಂಗತಿ ಎಂದರು.
  ವಿಶ್ವಪರಂಪರೆ ಮಾನ್ಯತೆ ಹೊಂದಿರುವ ಹಂಪಿಗೆ ಪ್ರತಿದಿನ ಸಹಸ್ರಾರು ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದು ಸಮರ್ಪಕ ಮೂಲಭೂತ ಸೌಲಭ್ಯ  ಕಲ್ಪಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು, ಗಣಿಗಾರಿಕೆಯಿಂದ ಆದ ನೈಸರ್ಗಿಕ ನಷ್ಟವನ್ನು   ಗಣಿ  ಕಂಪನಿಗಳೇ ಭರಿಸಬೇಕು,  ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ ಭಾರತ ಆಂದೋಲನದ ರೂಪುರೇಷೆಯಂತೆ  ಜನಸಾಮಾನ್ಯರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ರಸ್ತೆಗಳಲ್ಲಿ ಕಸ ಚೆಲ್ಲುವುದು ನಿಷೇಧಿಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಹೊಸಪೇಟೆಯನ್ನ ಹಸಿರು ನಗರವನ್ನಾಗಿಸಲು ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿಸಬೇಕು, ಹೊಸಪೇಟೆಯನ್ನು   ಡಿಜಿಟಲ್‌ನಿಂದ ಡೆವಲಪ್ ನಗರವನ್ನಾಗಿಸಲು ಪ್ರತಿಯೊಬ್ಬ ನಾಗರೀಕರು ಪಣತೊಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕನಸಿನ ಹೊಸಪೇಟೆ ವಿಷಯವಾಗಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸುಂದರ ಚಿತ್ರಗಳನ್ನು ಚಿತ್ರಿಸಿದ್ದರು.
   ನಗರದ ಟಿ.ಎಂ.ಎ.ಇ.ನ ಡಿ.ಎ.ವಿ. ಶಾಲೆ, ಅರವಿಂದ ನಗರದ ವಾಸವಿ , ಕೆ.ಎಸ್.ಪಿ. ಎಲ್, ದೀಪಾಯನ, ಪುಣ್ಯ ಮೂರ್ತಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಉತ್ತಮ ಪ್ರತಿಭೆ ಪ್ರದರ್ಶಿಸಿದರು.
    ತೀರ್ಪ್ಮಗಾರರಾಗಿ ಆಗಿಮಿಸಿದ್ದ ವಿಜಯನಗರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಅರವಿಂದ ಮಾತನಾಡುತ್ತಾ  ಸ್ಪರ್ಧೆಗಳಲ್ಲಿ ಪಾಲ್ಗೊಂಡಾಗ ವಿಷಯ ಮಂಡನೆ, ಆಂಗಿಕ ಭಾಷೆ ಹಾಗೂ ಹೇಳುವ ಭಂಗಿಗಳು ನಿರ್ಣಾಯಕ ಪಾತ್ರವನ್ನ ವಹಿಸಲಿದ್ದು ವಿದ್ಯಾರ್ಥಿಗಳು ಇವುಗಳ ಬಗ್ಗೆಯೂ ಗಮನಹರಿಸುವುದು ಅಗತ್ಯವಾಗಿದೆ ಎಂದರು.
   ಖುಸ್ರಿನ್ ಚಿತ್ರಕಲೆ ತೀರ್ಪುಗಾರರಾಗಿ ಆಗಮಿಸಿದ್ದರು. ಡಿ.ಎ.ವಿ. ಶಾಲೆ ಎರಡು ಸ್ಪರ್ಧೆಯಿಂದ ಐದು ಪ್ರಶಸ್ತಿಯನ್ನ ಬಾಚಿಕೊಂಡಿತು. ವಾಸವಿ ಶಾಲೆಗೆ ಒಂದು ಸ್ಥಾನ ಲಭಿಸಿತು. ಒಟ್ಟು ೩೫ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
    ಕಾರ್ಯಕ್ರಮದಲ್ಲಿ ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ನಂದಿನಿ ಚಿಕ್ಕ್‌ಮಠ್, ಕಾರ್ಯದರ್ಶಿ ರೇಖಾ ಪ್ರಕಾಶ್,  ವಿಜಯಾ ಅಗ್ನಿಹೋತ್ರಿ, ವೀಣಾ ಕೊತ್ತಂಬರಿ, ಜಯಶ್ರೀ ರಾಜಗೋಪಾಲ್, ಸುಧಾ ರೆಡ್ಡಿ, ಗೀತಾ.ಎಂ, ಅನ್ನಪೂರ್ಣ ಸದಾಶಿವ ಹಾಗೂ ಇತರರು ಪಾಲ್ಗೊಂಡಿದ್ದರು.
    ಆಗಸ್ಟ್ ೧೫ರ ಸ್ವಾತಂತ್ರ್ಯೋತ್ಸವದ ದಿನದಂದು ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

Please follow and like us:
error

Leave a Reply

error: Content is protected !!