ಹ್ರೈ-ಕ ಭಾಗದ ಅನುದಾನರಹಿತ ಶಾಲೆಗಳನ್ನ ರಾಜ್ಯ ಸರ್ಕಾರ ತಕ್ಷಣ ಅನುದಾನಕ್ಕೆ ಒಳಪಡಿಸಲಿ – ರಾಘವೇಂದ್ರ ಪಾನಘಂಟಿ.

ಕೊಪ್ಪಳ-06-  ಹಿಂದುಳಿದ ಪ್ರದೇಶ ಹ್ರೈ-ಕ ಭಾಗದ ಅನುದಾನರಹಿತ ಶಾಲೆಗಳನ್ನ ರಾಜ್ಯ ಸರ್ಕಾರ ತಕ್ಷಣ ಅನುದಾನಕ್ಕೆ ಒಳಪಡಿಸಲಿ ಕ್ರಮಕೈಗೊಳ್ಳುವಂತೆ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ  ರಾಘವೇಂದ್ರ ಪಾನಘಂಟಿ ಹೇಳಿದರು.
    ಅವರು ನಗರದ ಶ್ರೀ ಶಿವಶಾಂತವೀರ ಕಲ್ಯಾಣ ಮಮಟಪದಲ್ಲಿ ರವಿವಾರ ಕೊಪ್ಪಳ ತಾಲುಕಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
    ಹೈ.ಕ. ಬಾಗಕ್ಕೆ ೩೭೧ (ಜೆ) ಸೌಲಬ್ಯೆಕ್ಕಾಗಿ ರಾಜ್ಯ ಸರಕಾರ ನೇಮಿಸಿದ್ದ ಹೆಚ್.ಕೆ.ಪಾಟೀಲ ನೆತೃತ್ವದ ಸಮಿತಿ ಹೈದ್ರಾಬಾದ್ ಕರ್ನಾಟಕ ಬಾಗದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು  ಅನುದಾನಕ್ಕೆ ಒಳಪಡಿಸಿ ವಿಶೇಷ ಅನುಧಾನ ನೀಡಿ ಶೈಕ್ಷಣಿಕ ಅಭಿವೃದ್ದಿಗೊಳಿಸುವಂತೆ ಸರಕಾರಕ್ಕೆ ವರದಿ ಸಲ್ಲಿಸಿ ಎರಡು ವರ್ಷಗಳು ಕಳೆದರೂಸಹ ಜಾರಿಒಯಾಗಿಲ್ಲ. ರಾಜ್ಯಸರಕಾರದ ಶಿಕ್ಷಣ ಸಚಿವರು ಹಾಗು ಮುಖ್ಯ ಮಂತ್ರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
    ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾರದಾ ಶಾಲೆಯ ಮಲ್ಲಿಕಾರ್ಜುನ ಚೌಕಿಮಠ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುತ್ತಿದ್ದು ಸರಕಾರ ಹೊಸ ನೀತಿ ಜಾರಿಮಾಡುವಾಗ ನಮ್ಮ ಸಲಹೆ ಪಡೆದಾಗ ನಿಯಮಗಳ ಪರಿಣಾಮಕಾರಿ ಜಾರಿಗೆ ಸಾಧ್ಯ, ಹಾಗೂ ಸರಕಾರ ಅನಾವಶ್ಯಕ ತೊಂದರೆಗಳನ್ನು ನಿಲ್ಲಿಸಲಿ ಎಂದು ಹೇಳಿದರು.
    ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳು ಮಾತನಾಡಿ ಇತಿಹಾಸ ಕಾಲದಿಂದಲೂ ಗುರುವಿಗೆ ಭಾರತದೇಶದಲ್ಲಿ ಮಹತ್ವದ ಸ್ಥಾನ ನಿಡಿದ್ದು ಇತರೆ ಕೆಲಸಗಳಿಗಿಂತ ಶಿಕ್ಷಕ ವೃತ್ತಿಯಲ್ಲಿ ಅದು ಸೇವೆ ನಾಡಿನ ಉತ್ತಮ ಮೂರ್ತಿಗಳನ್ನು ರೂಪಿಸುವ ಶಕ್ತಿಎಂದು ಹೇಳಿದರು.
    ಶಿಕ್ಷಕರು ಮಗುವಿನ ಮುಗ್ದ ಮನಸ್ಸು ಹಾಗೂ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿ ವಿಶ್ವದ ಗಮನ ಸೆಳೆಯುವಂತ ಸುಂದರ ವ್ಯಕ್ತಿಯನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು.     ನಾಡಿನಲ್ಲಿ ಶಿಕ್ಷಕ ವೃತ್ತಿ ಮಾಡುವವರು ತಮ್ಮ ಮನಸ್ಸಸ್ಥಿತಿ ವೃದ್ದಿಗೆ ರಾಮಕೃಷ್ಣ ಆಶ್ರಮದಿಂದ ವಿಶೇಷ ತರಬೇತಿ ನಿಡಲಾಗುತ್ತಿದ್ದು ಹೆಸರಾಂತ ಪ್ರಾಚಾರ್ಯರು ಉಪನ್ಯಾಸಕರಿಂದ ಭೋದನೆ ಮಾಡಿಸಲಾಗುವುದು. ಮುಂದಿನ ದಿನಮಾನಗಳಲ್ಲಿ ಕೊಪ್ಪಳದ ಶಿಕ್ಷಕರಿಗೂ ತರಬೇತಿ ಆಯೋಜಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರತಿ ಶಾಲೆಯ ಒಬ್ಬ ಶಿಕ್ಷಕರನ್ನು ಉತ್ತಮ ಶಿಕ್ಷಕರೆಂದು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾಧ್ಯಕ್ಷ ಮಹಮ್ಮದ ಅಲಿಮುದ್ದೀನ ವಹಿಸಿದ್ದರು. ವೇದಿಕೆಯ ಮೇಲೆ ಕೆ.ಎಮ್.ಎಫ್ ಅಧ್ಯಕ್ಷ ವೆಂಕನಗೌಡ ಹಿರೆಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಮೇಶ ಪೂಜಾರ, ರೆಡ್ ಕ್ರಾಸ್ ನಿರ್ದೇಶಕ ಸೋಮರಡ್ಡಿ ಅಳವಂಡಿ, ಉದ್ಯಮಿಗಳು ಶ್ರೀನಿವಾಸ ಗುಪ್ತಾ, ಜಿಲ್ಲಾಕಾರ್ಯದರ್ಶಿ ಪ್ರಹ್ಲಾದ್ ಅಗಳಿ, ಹಿರಿಯರಾದ ಶಿವಪ್ಪ ಶೆಟ್ಟರ, ಜಗನ್ನಾಥ ಅಲ್ಲಂಪಲ್ಲಿ, ಪಾರ್ಥ ಸಾರತಿ, ವೀರಭದ್ರಗೌಡ  ಎತ್ತಿನಮನಿ ಇತರರು ಉಪಸ್ಥಿತರಿದ್ದರು.
 ಪ್ರಾರಂಭದಲ್ಲಿ ಶ್ರೀ ಗವಿಸಿದೇಶ್ವರ ಸಂಗೀತ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿವಕುಮಾರ ಕುಕನೂರ ಸ್ವಾಗತಿಸಿದರು, ಬಸವರಾಜ ಶಿರಗುಂಪಿ ಶೆಟ್ಟರ್ ನಿರೂಪಿಸಿದರು. ಖಾಜಾವಾಲಿ ಕುದರಿಮೋತಿ ವಂದಿಸಿದರು.

Please follow and like us:
error