ಯಶಸ್ವಿ ಶೈಕ್ಷಣಿಕ ಬಂದ್

ಕೊಪ್ಪಳ-26- ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಹಾಗೂ ಖಾಯಾಂತಿಗಾಗಿ  ವಿಶೇಷ ನಿಯಮಾವಳಿ ರೂಪಿಸಲು ಒತ್ತಾಯಿಸಿ  ರಾಜ್ಯ ಅತಿಥಿ ಉಪನ್ಯಾಸಕರ  ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ  ರಾಜ್ಯಾಧಾಧ್ಯಂತ ಇಂದು ಶುಕ್ರವಾರ ಜರುಗಿದ ಶಾಲಾ ಕಾಲೇಜುಗಳ ಶೈಕ್ಷಣಿಕ  ಚಟುವಟಿಕೆಗಳ ಬಂದ್  ಅಂಗವಾಗಿ ಇಂದು ಕೊಪ್ಪಳದಲ್ಲಿಯೂ  ಸಹ ಶೈಕ್ಷಣಿಕ ಚಟುವಟಿಕೆಗಳ ಬಂದ್ ಪ್ರತಿಭಟನೆ ಯಶಸ್ವಿಯಾಗಿ ಜರುಗಿತು .
ಹತ್ತು ಹಲವು ವರ್ಷಗಳಿಂದ  ಅತಿಥಿ ಉಪನ್ಯಾಸಕರು ಸೇವೆಲ್ಲಿದ್ದು ಸೇವಾ ಭದ್ರತೆ ಇಲ್ಲದೇ ಬಳಲುತ್ತಿದ್ದಾರೆ. ಅಲ್ಲದೇ ಕೆಲವು ಅತಿಥಿ ಉಪನ್ಯಾಸಕರಿಗೆ ವಯೋಮಿತಿ ಮೀರಿದೆ. ಇನ್ನು ಕೆಲವರು ಮೀರುತ್ತಿದ್ದಾರೆ. ಅಂತವರುಗಳನ್ನು ಸೇವಾ ಜೇಷ್ಠತೆ ಆಧಾರದ ಮೇಲೆ ಸೇವೆಯಲ್ಲಿ ಖಾಯಂ ವೀಲಿನಗೊಳಿಸಬೇಕು. ಸೇವೆಯಲ್ಲಿನ ಎಲ್ಲ ಅತಿಥಿ ಉಪನ್ಯಾಸಕರುಗಳಿಗೆ ಅವರವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಬೇಕು. ಕಳೆದ ೩೫ ದಿನಗಳಿಂದ ಮುಷ್ಕರ ನಡೆದರೂ ಸರ್ಕಾರ ಸ್ಪಂದಿಸದೇ ಇರುವದು ಅತಿಥಿ ಉಪನ್ಯಾಸಕರಲ್ಲಿ ಆತಂಕವುಂಟು ಮಾಡಿದೆಈ ಮೊದಲಾದ ಬೇಡಿಕೆಗಳನ್ನು ಈಡೇರಿಸಲಿಕ್ಕಾಗಿ ಸರ್ಕಾರದ ಗಮನ ಸೆಳೆಯಲು ಈ ಶೈಕ್ಷಣಿಕ ಚಟುವಟಿಕೆಗಳ ಬಂದ್ ಜರುಗಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು  ಮುಂಜಾನೆ ೯ ಕ್ಕೆ ಜಮಾಯಿಸಿದ ಅತಿಥಿ ಉಪನ್ಯಾಸಕರುಗಳು ಕೊಪ್ಪಳ ಜಿಲ್ಲಾ ಅತಿಥಿ ಹಾಗೂ ಅರೆ ಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ವೀರಣ್ಣ ಸಜ್ಜನರ ನೇತೃತ್ವದಲ್ಲಿ ಮೊದಲಿಗೆ  ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜುಗಳನ್ನು ಬಂದ್ ಮಾಡಿಸಿದರು.  ಅನಂತರ ಬಾಲಿಕೆಯರ ಸರ್ಕಾರಿ ಹಾಗೂ ಬಾಲಕರ ಸರ್ಕಾರಿ ಪ್ರೌಡ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು, ಶ್ರೀಗವಿಸಿದ್ದೇಶ್ವರ ಪ್ರೌಡ , ಪದವಿ ಪೂರ್ವ ಹಾಗೂ ಪದವಿ ಕಾಲೇಜು, ಶ್ರೀಮತಿ ಶಾರದಮ್ಮ ಕೊತಬಾಳ ಪದವಿ ಕಾಲೇಜು, ಸ್ವಾಮಿವಿವೇಕಾಂದ ಆಂಗ್ಲ ಮಾಧ್ಯಮ ಶಾಲೆ, ಟ್ರಿನಿಟಿ ಪಬ್ಲಿಕ್ ಹಾಗೂ ಎಸ್.ಎಫ್.ಎಸ್ ಶಾಲೆಗಳ ಪ್ರಾಂಶುಪಾಲರುಗಳಿಗೆ ಮನವಿ ಸಲ್ಲಿಸಿ ಸಹಕರಿಸುವಂತೆ ಕೋರಲಾಯಿತು.
ಅಂತಿಮವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವದರ ಮೂಲಕ  ಪ್ರತಿಭಟನೆ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ವಿಜಯಕುಮಾರ, ಕಲ್ಲೇಶ ಅಬ್ಬಿಗೇರಿ, ಸಂತೋಷ ಅವಧಿ, ಡಾ.ವೆಂಕನಗೌಡ, ಡಾ.ತುಕಾರಾಂ ನಾಯ್ಕ, ವಿಜಯ ತೋಟದ, ಪ್ರಕಾಶ ಜಡಿ, ಬಸವರಾಜ ಹುಳುಕಣ್ಣ, ಸಣ್ಣದೇವೆಂದ್ರಸ್ವಾಮಿ, ಶಿವಣ್ಣ, ಅಜ್ಜಪ್ಪ ಹುರಕಡ್ಲಿ, ಜ್ಞಾನೇಶ ಪತ್ತಾರ, ಬಿ.ಎಂ ಮಾಳೆಕೊಪ್ಪ, ಶಿ,ಕಾ ಬಡಿಗೇರ, ಡಾ.ಪ್ರಕಾಶ ಬಳ್ಳಾರಿ, ಶ್ರೀಮತಿ ಗೀತಾ ಬೆಲ್ಲದ, ಡಾ ಗಿರಿಜಾ ತುರಮುರಿ, ರೂಪಾ, ಅನುರಾಧಾ, ಹುಲಿಗೆಮ್ಮ ಮೊದಲಾದ ಅತಿಥಿ ಉಪನ್ಯಾಸಕರುಗಳು ಭಾಗವಹಿಸಿದ್ದರು.

Please follow and like us:
error