fbpx

ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಶಿಕ್ಷಣ ಸಂಸ್ಥೆ ಅನುದಾನಕ್ಕೆ ಚರ್ಚಿ-ಸಚಿವ ಶಿವರಾಜ ತಂಗಡಗಿ

 ಹೈ

ದ್ರಾಬಾದ್ ಕರ್ನಾಟಕದ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡಲು ಸರ್ಕಾರ ಮಟ್ಟದಲ್ಲಿ ಚರ್ಚಿಸುವುದಾಗಿ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ ಹೇಳಿದರು.

ಅವರು ನಗರದ ಶಿವಶಾಂತ ವೀರ ಮಂಗಲ ಭವನದಲ್ಲಿ ಶನಿವಾರದಂದು ಕೊಪ್ಪಳ ತಾಲೂಕಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಕೊಪ್ಪಳ ಇವರ ಹಮ್ಮಿ ಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಿಂದಿನ ಯುಪಿಎ ಸರ್ಕಾರೆ ಹೈ.ಕ. ಭಾಗಕ್ಕೆ ೩೭೧ (ಜೆ) ಕಲಂ ತಿದ್ದುಪಡಿ ಸಂದರ್ಭದಲ್ಲಿ ಸಚಿವ ಹೆಚ್.ಕೆ. ಪಾಟೀಲ್ ನೇತೃತ್ವದ ಸಮಿತಿಯಲ್ಲಿ ನಾನು ಸಹ ಸದಸ್ಯನಾಗಿ ಕೆಲಸ ಮಾಡಿದ್ದು ಹೈ.ಕ. ಭಾಗದ ಅರ್ಹ ಖಾಸಗಿ ಶಾಲೆಗಳಿಗೆ ಅನುದಾನ ನೀಡಲು ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದು ಈ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಶಿಕ್ಷಕರ ವೃತ್ತಿ ಬಹುದೊಡ್ಡ ಕೆಲಸವಾಗಿದ್ದು ಅದನ್ನು ಪ್ರತಿ ಯೊಬ್ಬರು ಗೌರವಿಸುವಂತಹದ್ದು. ಒಂದು ದಿನಕ್ಕೆ ಸಿಮಿತವಾಗುವುದು ಬೇಡ, ಪ್ರತಿದಿನ ಶಿಕ್ಷಕರನ್ನು ಗೌರವಿಸುವಂತಹ ವಾತಾವರಣ ನಿರ್ಮಿಸಲು ಶಿಕ್ಷಕರೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ೮೦ ಖಾಸಗಿ ಶಾಲೆ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸ ಲಾಯಿತು. 
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಒಕ್ಕೂಟದ ಜಿಲ್ಲಾಧ್ಯಕ್ಷ ರಾಘವೇಂದ್ರ ಪಾನಘಂಟಿ ವಹಿಸಿದ್ದರು.  
ವೇದಿಕೆಯಲ್ಲಿ ಶಿಕ್ಷಣ ತಜ್ಞ ಟಿ.ವಿ. ಮಾಗಳದ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ, ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ, ನಗರಾಧ್ಯಕ್ಷೆ ಲತಾ ಸಂಡೂರು, ಒಕ್ಕೂಟದ ಬಳ್ಳಾರಿ ಅಧ್ಯಕ್ಷ ಮರಿಸ್ವಾಮಿರೆಡ್ಡಿ, ಒಕ್ಕೂಟದ ಖಜಾಮಚಿ ಮಲ್ಲಿ ಕಾರ್ಜುನ ಚೌಕಿಮಠ, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ|| ಕೆ.ಜಿ. ಕುಲಕರ್ಣಿ, ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಸಿದ್ದರಾಮಯ್ಯ ಸ್ವಾಮಿ, ಒಕ್ಕೂಟದ ಯಲಬುರ್ಗಾ ಅಧ್ಯಕ್ಷ ಸಿ.ಎಚ್. ಪಾಟೀಲ, ಕುಷ್ಟಗಿ ಅಧ್ಯಕ್ಷ ಸಿದ್ದಪ್ಪ ಪಟ್ಟಣಶೆಟ್ಟರ, ಗಂಗಾವತಿ ಅಧ್ಯಕ್ಷ ರುದ್ರಪ್ಪ ಹಂಚಿನಾಳ, ಕೊಪ್ಪಳ ಅಧ್ಯಕ್ಷ ಮಹಮ್ಮದ್ ಅಲೀ ಮುದ್ದೀನ್, ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಲ್. ಹಿರೇಗೌಡ್ರ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಂತೋಷ ದೇಶಪಾಂಡೆ ಸ್ವಾಗತಿಸಿದರು. ಪ್ರಲ್ಹಾದ ಅಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರೆ ಪರಶುರಾಮ ಮ್ಯಾಳಿ ನಿರೂಪಿಸಿದರು, ಹುಲಗಪ್ಪ ಕಟ್ಟಿಮನಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರೆ  ಕೊನೆಯಲ್ಲಿ ವಿಜಯ ಕರಡಿ ವಂದಿಸಿದರು.
Please follow and like us:
error

Leave a Reply

error: Content is protected !!