ಸಹಸ್ರಾಂಜನೇಯ ದೇವಸ್ಥಾನಕ್ಕೆ ರಾಘವೇಶಾನಂದ ಭೇಟಿ

ಕೊಪ್ಪಳ, ಡಿ. ೩.  :ಜಗತ್ತಿನ ಪ್ರತಿ ಮೂಲೆಯಲ್ಲಿ ಆಂಜನೇಯ ದೇವಸ್ಥಾನಗಳಿವೆ, ಪ್ರತಿಯೊಂದು ವಿಭಿನ್ನತೆಯಿಂದ ಕೂಡಿವೆ ಆದರೆ ಕೊಪ್ಪಳದ ಈ ದೇವಸ್ಥಾನ ವಿಶ್ವಕ್ಕೆ ಮಾದರಿಯಾಗಲಿದೆ, ಇದು ಆಂಜನೇಯ ಶಕ್ತಿ ಕೇಂದ್ರವಾಗಲಿದೆ ಎಂದು ತಮಿಳನಾಡಿನ ಊಟಿಯ ರಾಮಕೃಷ್ಣಾಶ್ರಮದ ಶ್ರೀ ರಾಘವೇಶಾನಂದಜೀ ಮಹಾರಾಜ್ ಹೇಳಿದರು.
ಅವರು ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನಕ್ಕೆ ಭೇ

ಟಿ ನೀಡಿ ಪ್ರಕಾಶ ಶಿಲ್ಪಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಕಲ್ಪ ಹಾಗೂ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಪ್ಪಳ ರಾಮಕೃಷ್ಣಾಶ್ರಮದ ಶ್ರೀ ಚೇತನಾನಂದ ಸ್ವಾಮೀಜಿ ಮಾತನಾಡಿ, ಇಲ್ಲಿನ ದಿವ್ಯವಾದ ಶಕ್ತಿಯನ್ನು ಕಂಡು ವಿಸ್ಮಯಗೊಂಡಿದ್ದೇನೆ, ಇದು ಆಂಜನೇಯನ ನೆಲೆವೀಡು ಎನ್ನುವದಕ್ಕೆ ಇಲ್ಲಿ ನಡೆದಿರುವ ಕಾರ್ಯವೇ ಸಾಕ್ಷಿ, ಜಗತ್ತಿನ ಮೂಲೆ ಮೂಲೆಯಿಂದ ಇಲ್ಲಿಗೆ ಜನ ಬರುವ ದಿನಗಳು ದೂರವಿಲ್ಲ ಎಂದರು. ಹೊಸಪೇಟೆಯ ರಾಮಕೃಷ್ಣಾಶ್ರಮದ ಶ್ರೀ ಸ್ವಾಮಿ ಸುವೇದಾನಂದಜೀ ಮಹಾರಾಜ್ ಆಗಮಿಸಿದ್ದರು. ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ದೇವಸ್ಥಾನದ ಮಾಹಿತಿ ನೀಡಿದರು, ಪ್ರಕಾಶ ಶಿಲ್ಪಿ ಶ್ರೀಗಳನ್ನು ಸನ್ಮಾನಿಸಿದರು. ಶಿವಾಜಿ ಜಾಧವ ಇತರರಿದ್ದರು.

Leave a Reply