ಹಾಲುಮತ ಗುರುಪರಂಪರೆ’ ಕುರಿತು ಉಪನ್ಯಾಸ

ಕೊಪ್ಪಳ: ಕನ್ನಡ  ವಿಶ್ವವಿದ್ಯಾನಿಲಯ, ಹಂಪಿ ವಿದ್ಯಾರಣ್ಯದ ಹಾಲುಮತ ಅಧ್ಯಯನದ ಪೀಠವು ನೃಪತುಂಗ ಪ್ರೌಡಶಾಲೆಯ ಸಹಯೊಗದೊದಿಂಗೆ ಹಾಲುಮತ ಸಂಸ್ಕೃತಿ ಕುರಿತು ೦೯-೦೨-೨೦೧೫ ರಂದು ಬಿಸರಳ್ಳಿ ಗ್ರಾಮದಲ್ಲಿ ಎರಡನೆಯ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ನೃಪತುಂಗ ಶಿಕ್ಷಣದ ಸಂಸ್ಥೆಯ ಅಧ್ಯಕ್ಷರಾದ  ಮಂಜುನಾಥ ದಿವಟರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋದಕರ ಎನ್.ಬಿ. ವಿರೂಪಾಕ್ಷಿ ಅವರು ’ಹಾಲುಮತ ಗುರುಪರಂಪರೆ’ ಕುರಿತು ಉಪನ್ಯಾಸ ನೀಡುತ್ತ ಹಾಲುಮತ ಪರಂಪರೆಯಲ್ಲಿ ರೇವಣಸಿದ್ದ ಸಿದ್ದರಾಮ ಮತ್ತು ಅಮೋಘಸಿದ್ದ ಸಂಪ್ರದಾಯ ಇರುವುದನ್ನು ತಿಳಿಸಿದ್ದರು. ಈ ಪರಂಪರೆಯ ಮುಂದುವರಿಕೆಯಾಗಿ ಹಾಲುಮತ ಸಮಾಜದಲ್ಲಿ ಒಡೆಯರು ಕಾರ್ಯನಿರ್ವಹಿಸುತ್ತಿರುವುದನ್ನು ಈಗಲೂ ನೋಡಬಹುದಾಗಿದೆ ಎಂದು ವಿವರಿಸಿದರು. ಕುಕನೂರಿನ ಹನುಮಂತಪ್ಪ ಶೆಡ್ಡಪ್ಪನವರ ಅವರ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ಅವರ ಜೀವನ-ಸಾಧನೆಗಳನ್ನು ಪರಿಚಯಿಸುತ್ತ, ಶರಣಮ್ಮನವರು ಚಿಕ್ಕಂದಿನಿಂದಲೇ ಆಧ್ಯಾತ್ಮದ ಕಡೆಗೆ ಒಲವನ್ನು ಹೊಂದಿದ್ದರು. ಮುಂದೆ ತಮ್ಮ ಪೂರ್ಣ ಜೀವನವನ್ನು ಆಧ್ಯಾತ್ಮಿಕ ಸಾಧನೆಗಾಗಿಯೇ ಮುಡಿಪಾಗಿಟ್ಟರು. ಮಹಿಲೇಯರಿಗೆ, ರೈತರಿಗೆ ಅನೇಕ ಸಲಹೆಗಳನ್ನು ನೀಡುವ ಮುಖಾಂತರ ಅವರ ಬಾಳಿಗೆ ಬೆಳಕಾಗಿದ್ದರು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಹಾಲುಮತ ಅಧ್ಯಯನ ಪೀಠದ ಪಾಧ್ಯಾಪಕರಾದ ಡಾ. ಎಫ್.ಟಿ. ಹಳ್ಳಿಕೇರಿ ಅವರು ಈ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉದ್ದೇಶವನ್ನು ಸಭೆಗೆ ತಿಳಿಸಿದರು. ಹಿರಿಯ ಸಾಹಿತಿಗಳಾದ ಎಚ್.ಎಸ್. ಪಾಟೀಲ, ನೈಪತುಂಗ ಶಾಲೆಯ ಸ್ಥಾಪನೆಯ ಉದ್ದೇಶ ಅದು ಬೆಳೆದು ಬಂದ ಬಗೆಯನ್ನು ವಿವರಿಸಿದರು. ಈ ಕಾರ್ಯಕ್ರದಲ್ಲಿ ಗ್ರಾ.ಪಂ ಅಧ್ಯಕ್ಷ ವಿರುಪಾಕ್ಷಗೌಡ್ರ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹನುಮಂತಪ್ಪ ಅಂಡಗಿ, ವಕೀಳರಾದ ರವೀಂದ್ರಗೌಡ ಮಾಲಿಪಾಟೀಲ, ಹಿರಿಯ ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರ, ಶಾಲೆಯ ಮುಖ್ಯೋಪಾಧೈಆಯರಾದ ಎಂ.ಎಸ್. ಅಂಗಡಿ, ಬಿಸರಳ್ಳಿ  ಗ್ರಾಮದ ಹಿರಿಯರು, ನೃಪತುಂಗ ಶಾಲೆಯ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 
ಶಿಕ್ಷಕ ಎಸ್.ಎಫ್ ಪಾಟೀಲ ನಿರೂಪಿಸಿದರು. ಬಿ.ಹೆಚ್ .ಸಂಶಿ ಸ್ವಾಗತಿಸಿದರು. ಎನ್.ಎಮ್. ಹಾರೋಗೇರಿ ವಂದಿಸಿದರು. 
Please follow and like us:
error