You are here
Home > Koppal News > ಜೇಷ್ಠತಾ ಪಟ್ಟಿಗೆ ಬಾಧಿತ ಶಿಕ್ಷಕರುಗಳಿಗೆ ಆಕ್ಷೇಪಣೆಗೆ ಜ.೦೭ ಕೊನೆಯ ದಿನ

ಜೇಷ್ಠತಾ ಪಟ್ಟಿಗೆ ಬಾಧಿತ ಶಿಕ್ಷಕರುಗಳಿಗೆ ಆಕ್ಷೇಪಣೆಗೆ ಜ.೦೭ ಕೊನೆಯ ದಿನ

ಕೊಪ್ಪಳ ಡಿ.೩೧ ಕೊಪ್ಪಳ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಇಡಿ  ತರಬೇತಿ ಹೋದಿದ ಶಿಕ್ಷರಿಗೆ ಸರಕಾರಿ  ಪ್ರೌಢ ಶಾಲೆಗಳಲ್ಲಿನ ಗ್ರೇಡ್-೨ ಸಹ ಶಿಕ್ಷಕರ ಹುದ್ದೆಗೆ ಮತ್ತು ಬಿಪಿಇಡಿ ತರಬೇತಿ ಹೊಂದಿದ ದೈಹಿಕ ಶಿಕ್ಷಕರಿಗೆ-ಗ್ರೆಡ್-೨ ಶಿಕ್ಷಕರಿಗೆ ದೈಶಿ ಗ್ರೇಡ್-೧ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಜುಲೈ ೦೧, ೨೦೧೨ ರಲ್ಲಿದ್ದಂತೆ ವಿಷಯವಾರು ಅಂತಿಮ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಿದೆ. 
ಈ ಜೇಷ್ಠತಾ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಜನೇವರಿ ೦೭, ೨೦೧೩ ರೊಳಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರಾದ ಜಿ.ಹೆಚ್.ವೀರಣ್ಣ ತಿಳಿಸಿದ್ದಾರೆ.

Leave a Reply

Top