fbpx

ಇಂದು ಅಗಳಕೇರಾದಲ್ಲಿ ಜಾತ್ರಾಮಹೋತ್ಸವ ಹಾಗೂ ಸಾಮೂಹಿಕ ವಿವಾಹ.

ಕೊಪ್ಪಳ, ಸೆ.೧೩: ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ನಾಳೆ ದಿ.೧೪ ಸೋಮವಾರದಂದು ಶ್ರೀ ಬಸವೇಶ್ವರ ಮತ್ತು ರಾಮಲಿಂಗೇಶ್ವರ ಭಜನಾ ಮಹಾಮಂಗಲ ಹಾಗೂ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಜರುಗಲಿವೆ ಎಂದು ಗ್ರಾಮದ ಸದ್ಭಕ್ತ ಮಂಡಳಿ ಗುರುಹಿರಿಯರು ಹಾಗೂ ಯುವಕ ಸಹೋದರರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಅಂದು ಬೆಳಿಗ್ಗೆ ೮ ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಡೊಳ್ಳು, ಬಾಜಾ ಭಜಂತ್ರಿ, ಸಕಲ ಮಂಗಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಬಸವೇಶ್ವರ ಭಾವಚಿತ್ರ ಹಾಗೂ ಮೂರ್ತಿ ಮೆರವಣಿಗೆ ನಡೆಸಲಾಗುವುದು. ಅಭಿಜಿನ್ ಲಗ್ನದ ಶುಭ ಮುಹೂರ್ತ ೧೧ರಿಂದ ೧೨-೩೦ ಸಮಯದೊಳಗೆ ಹರಗುರುಚರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಜರುಗಲಿದೆ.  ಮುಂಡರಗಿ ಸಂಸ್ಥಾನಮಠದ ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳು, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಬೆದವಟ್ಟಿ ಹಿರೇಮಠದ ಷಟಸ್ಥಲ ಬ್ರಹ್ಮ ಶಿವಸಂಗಮೇಶ್ವರ ಶಿವಾಚಾರ್ಯರು, ನಗರಗಡ್ಡಿಮಠದ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಹಾಲ್ವರ್ತಿ ಕಾಗಿನೆಲೆ ಶಾಖಾಮಠದ ಬಸವರಾಜೇಂದ್ರ ಸ್ವಾಮಿಗಳು, ಸುಳೇಕಲ್ ರಾಜರಾಜೇಶ್ವರ ಬ್ರಹನ್ಮಠದ ಭುವನೇಶ್ವರ ತಾತನವರು, ಟನಕನಕಲ್ ವೀರೇಶ್ವರಮಠದ ಕಾಲಜ್ಞಾನಿ ಬ್ರಹ್ಮಸದ್ಗುರು ತಳ್ಳಿಹಾಳ ಶರಣಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಣ್ಣ ಕೋಟ್ರಪ್ಪ ಕೋರಗಲ್ ವಹಿಸಲಿದ್ದು ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಉದ್ಘಾಟಿಸುವರು, ಸಂಸದ ಸಂಗಣ್ಣ ಕರಡಿ ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಕೊಪ್ಪಳ ಎಪಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ಟಿ., ಮಾಜಿ ಎಂ.ಎಲ್.ಸಿ. ಕರಿಯಣ್ಣ ಸಂಗಟಿ, ಜಿ.ಪಂ.ಸದಸ್ಯ ಟಿ. ಜನಾರ್ಧನ ಹುಲಿಗಿ, ತಾ.ಪಂ. ಸದಸ್ಯೆ ಸುಶೀಲಮ್ಮ ವಿ. ಬಳ್ಳಾರಿ, ಗ್ರಾ.ಪಂ. ಅಧ್ಯಕ್ಷ ಆರ್.ಡಿ. ಮುಲ್ಲಾ. ಇನ್ನಿತರ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಗಳಿಂದ ಎಡೆನುಡಿಯ ರೂಪದಲ್ಲಿ ಹಿತವಚನ ಮಹಾಮಂಗಲ, ಮಹಾಶಿವಗಣಾರಾಧನೆ ಹಾಗೂ ಅನ್ನಸಂತರ್ಪಣೆ ಮಹಾಪ್ರಸಾದ ಜರುಗಲಿದ್ದು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಬಸವೇಶ್ವರ ಮತ್ತು ರಾಮಲಿಂಗೇಶ್ವರ ಕೃಪೆಗೆ ಪಾತ್ರರಾಗುವಂತೆ ಗ್ರಾಮದ ಸದ್ಭಕ್ತ ಮಂಡಳಿ ಕೋರಿದೆ.
Please follow and like us:
error

Leave a Reply

೮೮೨ನೆಯ ಬಸವ ಜಯಂತಿ.

ಕೊಪ್ಪಳ: ೮೮೨ನೆಯ ಬಸವ ಜಯಂತಿಯ ಪ್ರಯುಕ್ತ ೫ ದಿನಗಳ ಕಾರ್ಯಕ್ರಮವನ್ನು ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ, ಹಾಗೂ ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾಗಣ ಕೊಪ್ಪಳ ಜಿಲ್ಲಾ ಘಟಕಗಳ ಸಹಯೋಗದೊಂದಿಗೆ ಉದ್ಘಾಟನೆಗೊಂಡಿತು.
    ಉದ್ಘಾಟಕರಾಗಿ ಆಗಮಿಸಿದ ಶ್ರೀ ಶರಣ ವಿಶ್ವನಾಥ ನಿಲೂಗಲ್‌ರವರು ಜ್ಯೋತಿ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಪ್ರವಚನಕಾರರಾಗಿ ಆಗಮಿಸಿದ ಹೊಸಪೇಟೆಯ ವಿಜಯನಗರ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ  ಡಾ|| ಎಸ್.ಶಿವಾನಂದರವರು ಲಿಂಗವ್ಯಸನಿ ಜಂಗಮಪ್ರೇಮಿ ಎನ್ನುವ ವಚನೊಕ್ತ ವಿಷಯದ ಮೇಲೆ ತಮ್ಮ ಅಮೋಘವಾದ ವಾಣಿಯಿಂದ ಸಭೆಯನ್ನು ಮಂತ್ರಮುಗ್ದಗೊಳಿಸಿದರು. ಲಿಂಗವ್ಯಸನಿ ಎಂದರೆ ಮಾನವನು ತನ್ನನ್ನು ತಾನು ಅಂತರಂಗ ಹಾಗೂ ಬಹಿರಂಗವಾಗಿ ಶುದ್ಧಿಕರಿಸಿಕೊಳ್ಳುವುದು ಜಂಗಮಪ್ರೇಮಿ ಎಂದರೆ ಮಾನವನು ಸಮಾಜಮುಕಿಯಾಗಿ ಬದುಕಿ ಬಾಳುವುದು. ಈ ಎರಡು ವಿಷಯಗಳನ್ನು ಅರಿತು ತನ್ನ ಜೀವನದಲ್ಲಿ ಅನುಷ್ಠಾನಗೊಳಿಸಿಕೊಂಡರೆ ತನ್ನ ಹಾಗೂ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಅದೇ ಕಲ್ಯಾಣ ರಾಜ್ಯ – ಅದನ್ನೇ ಬಸವಾದಿ ಪ್ರಮಥರು ಸಾಧಿಸಿ ವಿಶ್ವಕ್ಕೆ ಮಾದರಿಯಾದರು ಎಂದು ಅಭಿಪ್ರಾಯಪಟ್ಟರು.
    ಕಾರ್ಯಕ್ರಮದಲ್ಲಿ ಇನ್ನೋರ್ವ ಪ್ರವಚನಕಾರರಾದ ಶರಣೆ ಚಂದ್ರಮ್ಮ ಸದಾನಂದ ಸ್ವಾಮಿ ನಿವೃತ್ತ ಅಧ್ಯಾಪಕರು ಧಾರವಾಡ ಮಹಾಮಾನವತವಾದಿ ಗುರು ಬಸವಣ್ಣನವರು ವಿಷಯದ ಮೇಲೆ ಪ್ರವಚನವನ್ನು ನೀಡಿದರು. ಕಾರ್ಯಕ್ರಮದ ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಗವಿಸಿದ್ದೇಶ್ವರ ಮಹಾವಿದ್ಯಾಲಯ ಕೊಪ್ಪಳದ ಪ್ರಾಂಶುಪಾಲರಾದ ಶರಣ ಎಸ್.ಎಲ್.ಮಾಲಿಪಾಟೀಲ್, ಶರಣೆ  ಅನ್ನಪೂರ್ಣ ಬಸವರಾಜ ಬಾಪೂರಮಠ, ಶರಣ ಕೆ.  ವೀರಣ್ಣ ಕೊರ್ಲಹಳ್ಳಿ ಉಪಸ್ಥಿತರಿದ್ದರು.ಪ್ರಾಸ್ತಾವಿಕ ನುಡಿಗಳನ್ನು ಶರಣ ಶಿವಬಸವಯ್ಯ ವಿರಾಪೂರ ಹಾಗೂ ಶರಣ ವಂದನೆಯನ್ನು ಡಾ|| ಶರಣಬಸವನಗೌಡ ಪೊಲೀಸ್‌ಪಾಟೀಲ್ ನೆರವೇರಿಸಿಕೊಟ್ಟರು. ಕುಮಾರಿ ಚೈತ್ರ ವಿರಾಪೂರ ತಂಡದವರು ವಚನ ನೃತ್ಯ ಅಭಿನಯವನ್ನು ಸಾಧರುಪಡಿಸಿದರು. ಶರಣ ಗುರುರಾಜ ಪಾಟೀಲ ಸಭೆಯ ಸಂಚಾಲಕತೆಯನ್ನು ವಹಿಸಿದರು. ಪ್ರಸಾದ ದಾಸೋಹವನ್ನು ಶರಣೆ ಶೋಭಾ ವೀರಣ್ಣ ಕೊರ್ಲಹಳ್ಳಿ ವಹಿಸಿಕೊಂಡಿದ್ದರು.
Please follow and like us:
error

Leave a Reply

error: Content is protected !!