೧೪ ನೇ ವರ್ಷದ ಕಾರ್ಗಿಲ್ ವಿಜಯೋತ್ಸವ
೧೯೯೯ ರಲ್ಲಿ ಇಂಡೋ ಪಾಕ್ ನಡುವೆ ನಡೆದ ಕಾಗಿರ್ಲ್ ಯುದ್ದದಲ್ಲಿ ಹುತಾತ್ಮರಾದ ಅಳವಂಡಿಗ್ರಾಮದ ವೀರ ಯೋಧ ಕಾರ್ಗಿಲ್ ಮಲ್ಲಯ್ಯ ಮೇಗಳಮಠ ಅವರು ವೀರ ಮರಣವನ್ನಪ್ಪಿ ಇವತ್ತಿಗೆ ೧೪ ವ ಕಳೆದಿವೆ.
ಅಳವಂಡಿ ಗ್ರಾಮದ ಅವರ ಗದ್ದುಗೆಯ ಹತ್ತಿರ ಅವರ ತಾಯಿಯವರಾದ ಮಾತೋಶ್ರೀ ತಾಯಿ ಗಂಗಮ್ಮ ಅವರು ರಾಷ್ಟ್ರ ದ್ವಜಾರೋಹಣ ಮಾಡುವ ಮೂಲಕ ೧೪ ನೇ ವರ್ಷದ ಕಾರ್ಗಿಲ್  ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘದ ಎಲ್ಲಾ ಸದಸ್ಯರು,  ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮದ ಹಿರಿಯರು, ಯುವಕರು, ಮಕ್ಕಳು ಭಾಗವಹಿದ್ದರು. ಊರಿನ ಗಲ್ಲಿಗಲ್ಲಿಗಳಲ್ಲಿ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಜುಲೈ ೨೬, ದಿನಾಂಕ ೨೬-೦೭-೨೦೧೩ ರಂದು ತಾಲೂಕಿನ ಅಳವಂಡಿ ಗ್ರಾಮದಲ್ಲಿ ೧೯೯೯ ರಲ್ಲಿ ನಡೆದ ಕಾಗಿಲ್ ಯುದ್ದದಲ್ಲಿ ವೀರ ಮರಣವನ್ನಪ್ಪಿದ ಮಲ್ಲಯ್ಯ ಮೇಘಲಮಠ ಅವರ ಸ್ಮರಣಾರ್ಥ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಊರಿನ ಬೀದಿ ಬೀದಿಗಳಲ್ಲಿ ಅವರ ಬಾವಚಿತ್ರ ಮೆರವಣಿಗೆ ಮಾಡಲಾಯಿತು. ತದನಂತರ ಅವರ ತಾಯಿಯವರ ಕೈಯಿಂದ ದ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. 
ಈ ಸಂದರ್ಬದಲ್ಲಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ರಾಕೇಶ ಪಾನಗಟ್ಟಿ, ಮಾತನಾಡಿ ದೇಶಕ್ಕಾಗಿ ಪ್ರಾಣ ಅರ್ಪಿಸುವುದು

ನಮ್ಮೆಲ್ಲರ ಆದ್ಯಕರ್ತವ್ಯ. ಕಾರ್ಗಿಲ್ ಬರಿ ಯುದ್ದವಲ್ಲ ಭಾರತದ ಕೆಚ್ಚು. ಮತ್ತು ಸೈನಿಕರ ಅಸೀಮ ಸಾಹಸವನ್ನು  ಬರಿ ಪಾಕಿಸ್ತಾನ ಮತ್ತು ಚೀನಾಕ್ಕಷ್ಟೆ ಅಲ್ಲ. ವಿಸ್ವಕ್ಕೆ ಪ್ರದರ್ಶಿಸಿದ ಅಸಮಾನ್ಯ ವಿದ್ಯಮಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಾನಂದ ಬಿರಾದಾರ,  ಪ್ರತಾಪ್, ರಾಜು, ಮಹೇಶ, ಗೇನೇಶ, ವೆಂಕಟೇಶ, ಪ್ರಶಾಂತ, ಪರಶುರಾಮ್, ರವಿ, ಆಜಪ್ಪ ಮತ್ತು ಊರಿನ ಸಮಸ್ತ ಹಿರಿಯರು ಬಾಗವಹಿಸಿದ್ದರು. 
Please follow and like us:
error