ಶ್ರೀ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯ ೧೧ ನೇ ಶಾಲಾ ವಾರ್ಷಿಕೋತ್ಸವ

ಕೊಪ್ಪಳ :   ಶ್ರೀ ನಂದೀಶ್ವರ ಶಿಕ್ಷಣ ಸಂಸ್ಥೆಯ ಶ್ರೀ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯ ೧೧ ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಂದೀಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ  ಶಿವಪ್ಪ ಶೆಟ್ಟರ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ ಕುಂಬಾರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಬೀರಪ್ಪ ಅಂಡಗಿ ಕರ್ನಾಟಕ ರಾಜ್ಯ ಅಂಗವಿಕಲರ ಸಂಘದ ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ಶಿಕ್ಷಣವು ಮಗುವಿಗೆ ಅವಶ್ಯವಾಗಿ ಬೇಕು. ಶಿಕ್ಷಣದ ಜೊತೆಗೆ ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಂದೀಶ್ವರ ಶಾಲೆಯು ಕೂಡ ಶಿಕ್ಷಣವನ್ನು ಸತತ ೧೧ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದರು.  ಆನಂದ ಹಳ್ಳಿಗುಡಿ ಯುನಿಸೇಫ್ ಚೈಲ್ಡ್ ಕೇರ್ ಕೊಪ್ಪಳ ಇವರು ಒಂದು ಶಾಲೆಯು ಒಂದು ರಾಷ್ಟ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಕ್ಷಣವು ಮಗುವಿನ ವಿಕಾಸದ ಬೆಳವಣಿಗೆಯಲ್ಲಿ ಪ್ರಥಮ ಹಂತವಾಗಿ ಕಾರ್ಯನಿರ್ವಹಿಸುತ್ತದೆ. ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಹನುಮೇಶ ಕಲ್ಮಂಗಿ,  ಸುಭಾಷ ಕಲಾಲ , ಶಂಕ್ರಪ್ಪ ಈಶ್ವರಗೌಡ, ರಾಮಣ್ಣ ವೇಮಲಿ, ರಾಮಣ್ಣ ಮಾದನೂರ, ಎಚ್.ಎಮ್.ಷಣ್ಮುಖಯ್ಯ, ಸಾಹೇಬಗೌಡ್ರು, ಅಮರೇಶ ಕರಡಿ, ಶ್ರೀಮತಿ ಕವಿತಾ, ಶ್ರೀಮತಿ ಸುವರ್ಣಾ.ಹೆಚ್, ರಾಜು ಎಂ, ಅಂದಪ್ಪ.ಬಿ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು. 
ಕಾರ್ಯಮದ ಪ್ರಾರ್ಥನಾ ಗೀತೆಯನ್ನು ಗಾನ ಭಾರತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ನೆರವೇರಿಸಿದರು. ಸ್ವಾಗತ ಪುಷ್ಪಾರ್ಪಣೆ ಕಾರ್ಯಕ್ರಮವನ್ನು ಕುಮಾರಿ ಹರಿಣಿ ನೆರವೇರಿಸಿದರು. ಶಾಲಾ ವಾರ್ಷಿಕ ವರದಿ ವಾಚನವನ್ನು ಸುರೇಶ ಕುಂಬಾರ ನೆರವೇರಿಸಿದರು. ಶ್ರೀಮತಿ ಗೀತಾ ಹಾಗೂ ಕುಮಾರಿ ದಿವ್ಯ ಭಾರತಿ ಶಿಕ್ಷಕಿಯರು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕುಮಾರಿ ಅನಿತಾ ಹಾಗೂ ಕುಮಾರಿ ಸಬಿಯಾ ನಡೆಸಿದರು ಕುಮಾರಿ ಅಕ್ಷತಾ ಕಾರ್ಯಕ್ರಮವನ್ನು ವಂದಿಸಿದರು.  
Please follow and like us:
error