fbpx

ಸುಬ್ರಾಯ ಕಾಮತ್ ನಿವೃತ್ತಿ ವೇತನ ಬಿಡುಗಡೆಗೆ ಕ್ರಮ

ಬೆಂಗಳೂರು, ಮಾರ್ಚ್  : ನಿವೃತ್ತ ಕೆ.ಎ.ಎಸ್. ಅಧಿಕಾರಿ ಸುಬ್ರಾಯ ಕಾಮತ್ ಅವರ ನಿವೃತ್ತಿ ವೇತನ ಬಿಡುಗಡೆಗೆ ಕ್ರಮವಹಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ದಿನ ಪತ್ರಿಕೆಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಸುಬ್ರಾಯ್ ಅವರು 2013 ರಲ್ಲಿ ನಿವೃತ್ತಿ ಹೊಂದಿದ್ದರೂ ಇದುವರೆವಿಗೆ ನಿವೃತ್ತಿ ವೇತನ ನೀಡದೆ ತಡೆಹಿಡಿಯಲಾಗಿರುವ ಬಗ್ಗೆ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಶ್ರೀಯುತರು ಹುಣಸೂರು ಪುರಸಭೆಯಲ್ಲಿ ಆಡಳಿತ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ನಡೆದಿದೆಯೆನ್ನಲಾದ ವಿಚಾರವೊಂದು ತನಿಖೆಯಲ್ಲಿರುವ ಕಾರಣ ಇವರ ನಿವೃತ್ತಿ ವೇತನವನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಇವರ ಕಡತಗಳನ್ನು ತರಿಸಿಕೊಂಡು ಕೂಡಲೇ ಪರಿಶಿಲನೆ ನಡೆಸುವ ಮೂಲಕ ತಡೆಹಿಡಿಯಲಾಗಿರುವ ಅವರ ನಿವೃತ್ತಿ ವೇತನ ಬಿಡುಗಡೆಗೆ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು.
Please follow and like us:
error

Leave a Reply

error: Content is protected !!