fbpx

ಇರಕಲ್ಲಗಡಾ: `ವಿಜ್ವೀಲ್ ಅಭಿಯಾನ’ ಯಶಸ್ವಿ

 ತಾಲೂಕಿನ ಇರಕಲ್ಲಗಡಾ ಗ್ರಾಮದಲ್ಲಿ `ನಿರ್ಮಲ ಭಾರತ ಅಭಿಯಾನ’ ಯೋಜನೆಯಡಿಯಲ್ಲಿ ಜಿಲ್ಲಾ ಪಂಚಾಯತ್ ಹಮ್ಮಿಕೊಂಡಿರುವ `ವಿಜ್ವೀಲ್ ಅಭಿಯಾನ’ (ಸಿಟಿ ಅಭಿಯಾನ)ಕ್ಕೆ ಚಾಲನೆ ನೀಡಿ ಯಶಸ್ವಿಗೊಳಿಸಲಾಯಿತು.
ಜಿಲ್ಲಾ ಪಂಚಾಯತ, ತಾ.ಪಂ. ಆದೇಶದಂತೆ ಗ್ರಾಮ ಪಂಚಾಯತ ವತಿಯಿಂದ ಗ್ರಾಮದಲ್ಲಿ ಬೆಳಿಗ್ಗೆ ೫ ಗಂಟೆಗೆ ಗ್ರಾ.ಪಂ. ಉಪಾಧ್ಯಕ್ಷ ಶರಣಪ್ಪ  ಪಟ್ಟಣಶೆಟ್ಟಿ ಅಭಿಯಾನಕ್ಕೆ ಸಿಟಿ ಉದುವ ಮೂಲಕ ಚಾಲನೆ ನೀಡಿದರು. ೧೦ ಗಂಟೆಯವರೆಗೂ ಅಭಿಯಾನದ ಕುರಿತು ಹಾಗೂ ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ಶೌಚಾಲಯಗಳನ್ನು ನಿರ್ಮಿಕೊಳ್ಳಲು ಸಾರ್ವಜನಿಕರಲ್ಲಿ ಮನವರಿಕೆ ಮಾಡಿಕೊಡಲಾಯಿತು. ಇದೇ ವೇಳೆ ಯೋಜನೆ ಕುರಿತಾದ ಭಿತ್ತಿ ಪತ್ರ, ಕ್ಯಾಲೆಂಡರ್, ಡೈರಿ ಹಾಗೂ ಇತರೆ ಶೌಚಾಲಯಕ್ಕೆ ಸಂಬಂಧಿಸಿದ ಕರಪತ್ರಗಳನ್ನು ನೀಡಿ ವಯಕ್ತಿಕ ಶೌಚಾಲಯದಿಂದಾಗುವ ಲಾಭ, ಸ್ವಾಸ್ಥ್ಯ ಹಾಗೂ ಆರೋಗ್ಯ ಪೂರ್ಣ ಪರಿಸರ ಕುರಿತು ತಿಳಿಸಲಾಯಿತು.   ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ರಾಮಣ್ಣ ಪಿನ್ನಿ, ಹುಸೇನಸಾಬ, ಯಲ್ಲಪ್ಪ, ಶಿವಪ್ಪ ಭಜಂತ್ರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ನಾಯಕ ಸಿಬ್ಬಂದಿಗಳಾದ ಕೋಟ್ರೇಶ ಪಿ., ರಾಮಣ್ಣ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!