ಕನ್ನಡ ನಾಡು-ನುಡಿ ಸೇವೆಗೆ ಅವಕಾಶ ನೀಡಿ-ಅಂಗಡಿ.

ಕೊಪ್ಪಳ-21- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಹಲವು ಸಾಹಿತಿಗಳ,ಅಜೀವ ಸದಸ್ಯರ ಒತ್ತಾಯದಿಂದ ಈ ಬಾರಿಯೂ ಸ್ಪರ್ಧಿಸಿದ್ದೇನೆ. ಕಳೆದ ಬಾರಿ ನಾನು ಸ್ಪರ್ಧಿಸಿದಾಗ ಅತ್ಯಲ್ಪ ಮತಗಳ ಅಂತರದಲ್ಲಿ ಸೋಲು ಅನುಭವಿಸಿದೆ ನಂತರ ಸಹ ಕನ್ನಡ ನಾಡು-ನುಡಿಯ ಸೇವೆಯನ್ನು ಬಿಟ್ಟಿಲ್ಲ,ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು ನುಡಿ ಸೇವೆಗೆ ಅವಕಾಶ  ನೀಡುತ್ತೀರಿ ಎಂದು ಅಭ್ಯರ್ಥಿ ರಾಜಶೇಖರ ಅಂಗಡಿ ಹೇಳಿದರು.
ಅವರು ಗುರುವಾರದಂದು ಕಿನ್ನಾಳದಲ್ಲಿ ಪ್ರಚಾರ ನಡೆಸಿ  ಸಾಹಿತಿಗಳ, ಅಜೀವ ಸದಸ್ಯರ  ಮನೆಗೆ ಭೇಟಿ ನೀಡಿ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.  ಈ ಸಂದರ್ಭದಲ್ಲಿ ಷಡಕ್ಷರಯ್ಯ ಹಿರೇಮಠ,ಗಿರೀಶ ಪಾನಗಂಟಿ,ಶಂಕರ ಪರಗಿ,ಬಾಷ ಹಿರೇಮನಿ,ಬಸಪ್ಪ ದೇಸಾಯಿ,ಬಸವರಾಜ್ ಲಕ್ಕುಂಡಿ,ಶೇಖರಪ್ಪ ಶಿವಶಿಂಪಿ ಮೊದಲಾದವರು ಇದ್ದರು.
Please follow and like us:
error