ಶ್ರೀಗವಿಮಠದ ದಾಸೋಹಕ್ಕೆ ೭ ಕ್ವಿಂಟಾಲ್ ಮೋತಿಚೂರು.

ಕೊಪ್ಪಳ:ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ನಡೆಯುವ ಮಹಾದಾಸೋಹಕ್ಕಾಗಿ  ಇದುವರೆಗೂ ಜಿಲ್ಲೆಯಾಧ್ಯಾಂತ ಜನರು ತಮ್ಮ ತನುಮನಧನ ಕಾಳುಕಡಿ,ತರಕಾರಿ,ಇತರೇ ವಸ್ತುಗಳನ್ನು ಜಾತ್ರೆಯ ಮುನ್ನಾ ಅಪಿಸುತ್ತಿದ್ದಾರೆ.  ಈಗ ಜಾತ್ರೆಯ ನಂತರವು  ಅದು ಮುಂದುವರೆದಿದೆ.ಸಿಂಪಿಲಿಂಗಣ್ಣ ರಸ್ತೆಯಲ್ಲಿನ ಶ್ರೀಲಕ್ಷ್ಮಿ ಸ್ವಸಹಾಯಗುಂಪು ಹಾಗೂ ಶ್ರೀಗಜಾನನ ಗೆಳೆಯರ ಬಳಗವು ಜಂಟಿಯಾಗಿ ಮಹಾಸೋಹಕ್ಕಾಗಿ ಸುಮಾರು ೬ ಕ್ವಿಂಟಾಲ್ ಮೋತಿಚೂರು ( ಸಿಹಿಲಾಡು) ತಯಾರಿಸಿದ್ದಾರೆ. ಸೋಮವಾರ ಸಂಜೆಯಲ್ಲಿ  ಇದನ್ನು ಪ್ರಸಾದದಲ್ಲಿ  ಸುಮಾರು ೨೦ ಸಾವಿರಕ್ಕಿಂತಲೂ ಹೆಚ್ಚು  ಉಂಡೆಗಳ ರೂಪದಲ್ಲಿ ವಿತರಿಸಲಾಗುತ್ತದೆ. ಬಸವರಾಜ ಹಕ್ಕಂಡಿಯವರ ಮನೆಯ ಆವರಣದಲ್ಲಿ ಈ ಸಿಹಿತಿನಿಸನ್ನು ತಯಾರಿಸುವ ಹಾಗೂ ಮಹಿಳೆಯರು ಉಂಡೆಗಳನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.  ಮಹಾಂತಗೌಡರು,ಬಸವರಾಜನೀರಲಗಿ, ಶಿವುಕೋಣಂಗಿ,ರಘುನಾಥಸಿಂಗ,ಭವಾನಿಸಿಂಗ್, ಬಸವರಾಜಹಕ್ಕಂಡಿ,ಶಿವನಗೌಡ್ರ,ಪ್ರಕಾಶ ಇನಾಮತಿ,ಅಮರೇಶಪ್ಪಕೋರಿ, ಸಂಜೀವ್ಕುಮಾರ, ಸುವರ್ಣ ನೀರಲಗಿ,ಮಥುರಾಕುಲಕರ್ಣಿ,ಹನುಮವ್ವ ಇಪ್ಪರಗಿ,ಉಮೇಶಗೌಡ್ರ ಮೊದಲಾದವರು  ಇದರಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಸಂಜೆ ಶ್ರೀಮಠಕ್ಕೆ ತರಲಾಗುವದೆಂದು ಸಂಘಟಕರು ಮಾಧ್ಯಮಕ್ಕೆ ತಿಳಿಸಿದ್ದಾರೆ. 
Please follow and like us:
error