ಜೆ.ಡಿ.ಎಸ್ ಪಕ್ಷವನನು ಬೆಂಬಲಿಸಲು ಸುರೇಶ ಭೂಮರಡ್ಡಿ ಕರೆ

   ನಿಂಗಾಪೂರ ಹೊಸಳ್ಳಿ ಗ್ರಾಮಕ್ಕೆ ಜೆಡಿಎಸ್ ಪಕ್ಷದ ಪ್ರಚಾರದ ನಿಮಿತ್ಯ ಮುಖಂಡರದ ಸುರೇಶ್ ಭೂಮರಡ್ಡಿ ಯವರು ಬೇಟಿ ನೀಡಿ ಗ್ರ್ರಾಮದ ಕರಿಯಮ್ಮ ದೇವಸ್ಥಾನದಲ್ಲಿ ಸಭೆಸೇರಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಜೆ.ಡಿ.ಎಸ್ ಪಕ್ಷವು ಒಂದು ಒಳ್ಳೆಯ ಪಕ್ಷವಾಗಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷವಾಗಿದ್ದು, ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಇಕ್ಬಾಲ್ ಅನ್ಸಾರಿ ಸಾಹೇಬರು ತಮ್ಮ ಶಕ್ತಿ ಮೀರಿ ಪಕ್ಷವನ್ನು ಬಲಪಡಿಸುವತ್ತಾ ಗಮನ ಹರಿಸಿದ್ದಾರೆ. ಇದರಿಂದ ನಮ್ಮ ಪಕ್ಷವು ಬೆಳೆಯುವದರಲ್ಲಿ ಯಾವುದೇ ಅನುಮಾನವೇ ಇಲ್ಲ. ಆದ್ದರಿಂದ ನಾವು – ನೀವೆಲ್ಲಾ ಒಟ್ಟುಗುಡಿ ಪಕ್ಷವನನು ಬೆಂಬಲಿಸೋಣವೆಂದು ಕರೆ ನೀಡಿದರು.
 ಇದೇ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದಲ್ಲಿದ್ದ ದಾದಾಖಲಂದರ ಶಾಮೀದ್ ಅಲಿ ಹಾಗೂ ಅವರ ಸಂಗಡಿಗರಾದ ನಾಗರಾಜ ಮತ್ತು ಇತರರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸಭೆಯಲ್ಲಿ ಜಗನ್ನಾಥ ಹುಲಿಗಿ, ಫಕೀರಪ್ಪ ಕಟ್ಟಿ, ಜಿಲಾನ್ ಟೈಲರ್, ನಾಸೀರ್ ಕಂಠಿ, ವಿನೋದ್.ಕೆ.ಪೂಜಾರ್ ಮುಂತಾದವರು ಭಾಗವಹಿಸಿದ್ದರು. 
Please follow and like us:
error