ವಿವಿಧ ದತ್ತಿನಿಧಿ ಪ್ರಶಸ್ತಿ : ಪುಸ್ತಕಗಳಿಗೆ ಆಹ್ವಾನ

 ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ೨೦೧೨ ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
ವಿ.ಗೌರಮ್ಮ ಗಂಗಾಧರಯ್ಯ ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿಗೆ (ರೂ.೧೦,೦೦೦/- ನಗದು) ಡಾ. ಜಚನಿ ಸಮೀಕ್ಷೆ ಹಾಗೂ ಸಾಹಿತ್ಯ ಕುರಿತು ಬರೆದ ಕೃತಿಗಳು. ಗುಬ್ಬಿ ಸೋಲೂರು ಮುರುಗಾರಾದ್ಯ ದತ್ತಿ ಪ್ರಶಸ್ತಿ (ಶ್ರೇಷ್ಠ ಕಾದಂಬರಿಗಳಿಗೆ ರೂ.೫,೦೦೦/- ನಗದು) ಹಾಗೂ ನಿಡಸಾಲೆ ಪುಟ್ಟ ಸ್ವಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ (ಯಾವುದೇ ಪ್ರಕಾರದ ಶ್ರೇಷ್ಠ ಕೃತಿಗಳಿಗೆ ರೂ.೫,೦೦೦/- ನಗದು) ಗಳಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪುಸ್ತಕಗಳನ್ನು ಕಳುಹಿಸಲು ಆ.೩೦ ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗಾಗಿ ಕನ್ನಡ ಸಾಹಿತ್ಯ ಪ್ರಶಸ್ತಿ, ಪಂಪಾ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-೧೮ ದೂರವಾಣಿ ಸಂಖ್ಯೆ: ೦೮೦-೨೬೬೨೩೫೮೪ ಇವರನ್ನು ಸಂಪರ್ಕಿಸಬಹುದಾಗಿದೆ  
Please follow and like us:
error