ಶಿಕ್ಷಣದ ಕೇಸರಿಕರಣ ಬಿಜೆಪಿ ಸರಕಾರದ ಮುಖ್ಯ ಅಜೆಂಡಾ; ಅನಂತ ನಾಯಕ್

 ಪಠ್ಯಕ್ರಮದ ಪರಿಷ್ಕರಣೆ ಹೆಸರಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಠ್ಯಗಳಲ್ಲಿ ಕೇಸರಿಕರಣದ ವಿಚಾರಗಳನ್ನು ತುರುಕುತ್ತಿದೆ. ಈ ಮೂಲಕ ಎಳೆಯ ಮನಸ್ಸುಗಳಲ್ಲಿ ಜಾತೀಯ ವಿಷ ಬೀಜ ಬಿತ್ತಿ ಶಿಕ್ಷಣವನ್ನು ಕೇಸರಿಕರಣ ಮಾಡುವುದು ಬಿಜೆಪಿ ಸರಕಾರದ ಮುಖ್ಯ ಅಜೆಂಡಾ ವಾಗಿದೆ ಎಂದು ಎಸ್.ಎಫ್.ಐ ರಾಜ್ಯ ಅದ್ಯಕ್ಷ ಎನ್, ಅನಂತ ನಾಯ್ಕ್ ಆರೋಪಿಸಿದರು. ಅವರು ನಗರದ ಜನರಲ್ ಹಾಸ್ಟೆಲ್ ಮೈದಾನದಲ್ಲಿ ಎಸ್.ಎಫ್.ಐ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರಿದು ಸರಕಾರ ಐದು ಮತ್ತು ಎಂಟನೆ ತರಗತಿ ಪುಸ್ತಕಗಳನ್ನು ೨೦೧೨-೧೩ ನೇ ಸಾಲಿನ ಶೈಕ್ಷಣಿಕ ಅವಧಿಗೆ ಬದಲಾಯಿಸಲು ಹೋರಟಿದೆ. ಪಠ್ಯಪುಸ್ಥಕಗಳನ್ನು ಬದಲಾಯಿಸಲು ಶಿಕ್ಷಣ ತಜ್ಷರ ರಚನಾ ಸಮಿತಿಯನ್ನು ಮಾಡದೆ ಕೇಶವ ಕೃಪ ದಲ್ಲಿರುವ ಆರ್.ಎಸ್.ಎಸ್ ನಾಯಕರನ್ನು ಒಳಗೊಂಡಂತೆ ಪಠ್ಯಪುಸ್ತಕ ಬದಲಾಯಿಸಲು ಹೊರಟಿದ್ದಾರೆ. ವೈಜ್ಷನಿಕ ಶಿಕ್ಷಣದ ಅರುವು ತಿಳಿಯದ ಆರ್.ಎಸ್. ಎಸ್ ನಾಯಕರು ದೇವಾಲಯಗಳನ್ನು ಪೌರೋಹಿತ್ಯವನ್ನು ವೈಭವಿಕರಿಸಿದ್ದಾರೆ. ಸ್ವತಂತ್ರ್ಯ ಹೋರಾಟದಲ್ಲಿ ಮಡಿದವರ ಇತಿಹಾಸವನ್ನು ತಿರುಚಲಾಗಿದೆ. ಬಸವಣ್ಣನವರ ನಿಜವಾದ ವಿಚಾರಗಳನ್ನು ಮರೆ ಮಾಚಿ ದರ್ಮದ ಕುರಿತಾದ ವಿಚಾರಗಳನ್ನು ಎಳಯ ವಿದ್ಯಾರ್ಥಿಗಳ ಮೇಲೆ ಹೇರಲು ಹೊರಡಿದ್ದಾರೆ. ಕೂಡಲೆ ಶಿಕ್ಷಣ ಸಚಿವ ಕಾಗೇರಿಯವರು ಈ ಪಠ್ಯಗಳನ್ನು ಪರಿಷ್ಕರಿಸಿ ಸಂವಿದಾನಾತ್ಮಕವಾಗಿ ಪಠ್ಯಗಳನ್ನು ರಚಸುವಂತೆ ಅವರು ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿ.ವೈ.ಎಫ್.ಐ ಮುಖಂಡ ಸುಂಕಪ್ಪ ಗದಗ್ ಮಾತನಾಡಿ ಶಿಕ್ಷಣದ ವಾತವರಣವನ್ನು ಹದೆಗೆಡುಸುತ್ತಿರುವ ಬಿಜೆಪಿ ಸರಕಾರವನ್ನು ಕಿತ್ತೆಸೆಯಬೇಕು. ಅದಕ್ಕಾಗಿ ಎಸ್.ಎಫ್.ಐ ನಡೆಸುತ್ತಿರು ಹೋರಾಟಕ್ಕೆ ಡಿ.ವೈ.ಎಫ್.ಐ ಬೆಂಬಲ ನೀಡಲಿದೆ ಎಂದರು. ಎಸ್.ಎಫ್.ಐ ಜಿಲ್ಲಾ ಉಪಾಧ್ಯಕ್ಷ ಬಾಳಪ್ಪ ಹುಲಿಹೈದರ್ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿರು ಸರಕಾರಿ ಶಾಲಾ ಕಾಲೇಜುಗಳನ್ನು ಅಭಿವೃದಿ ಮಾಡಿ ಎಂದು ಲಕ್ಷಣ ಸವಡಿಯವರಿಗೆ ಮನವಿ ನೀಡಿದರೆ ಸದನದಲ್ಲಿ ಶೈಕ್ಷಣಿಕವಿಚಾರಗಳನ್ನು ಚರ್ಚಿಸದೆ ನೀಲಿ ಚಿತ್ರ ವಿಕ್ಷಣೆಯಲ್ಲಿ ನಿರತರಾಗಿದ್ದರು ಇಂತಹ ಅನಾಗರಿಕರನ್ನು ಚುನಾವಣೆಯಲ್ಲಿ ಆರಿಸಿ ಕಳಿಸಿದರೆ ಅಪಾಯ ಖಂಡಿತ ಎಂಬುದಕ್ಕೆ ಸಾಕ್ಷಿಯಾದರು ಎಂದು ಆರೋಪಿಸಿದರು. ಎಸ್.ಎಫ್.ಐ ಮುಖಂಡರುಗಳಾದ ದುರಗೇಶ್ ಡಗ್ಗಿ, ಹನಮಂತ್ ಭಜೊಂತ್ರಿ, ರಾಷೀದ್ ಖಾಜಿ ಮಾತನಾಡಿದರು.
ರಂದು ಜಿಲ್ಲೆಯಾಧ್ಯಂತ ಸೈಕಲ್ ಜಾಥಾ ಮಾಡಲು ಸಮಾವೇಷದಲ್ಲಿ ತಿರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ ಮಾತನಾಡುತ್ತಾ ಜಿಲ್ಲೆಯಲ್ಲಿರು ಸರಕಾರಿ ಶಾಲೆ ಕಾಲೇಜುಗಳು ಮೂಲಸೌಲಭ್ಯಗಳಿಂದ ನರಳುತ್ತಿವೆ. ಶೆ೮೦% ಶಾಲೆ-ಕಾಲೇಜುಗಳಲ್ಲಿ ಶೌಚಾಲಯ, ಕುಡಿಯುವ ನೀರು, ಕ್ರೀಡಾಂಗಣ, ಶಿಕ್ಷಕ- ಉಪನ್ಯಾಸಕ-ಬೋಧಕೇತರ ಸಿಬ್ಬಂದಿಗಳ ಕೊರತೆ ಕಾಣುತ್ತಿದೆ. ಇವುಗಳನ್ನು ಈಡೇರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕಾದ ಸರಕಾರ ಶಿಕ್ಷಣವನ್ನು ಖಾಸಗಿಕರಣ ಮಾಡಿ ಮಾರಾಟಮಾಡಲು ನಿಂತಿದ್ದಾರೆ.ಜಿಲ್ಲೆಯಲ್ಲಿ ವ್ಯಾಪಕ ಡೊನೆಷನ್ ಹಾವಳಿ ನಡೆಯುತ್ತಿದ್ದರು ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ಪ್ರಾಸ್ಥಾವಿಕವಾಗಿ ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಗ್ಯಾನೇಶ ಕಡಗದ್ ಮಾತನಾಡಿದರಿ ಎಸ್.ಎಫ್.ಐ ಮುಖಂಡ ಮಾರುತಿ ಮ್ಯಾಗಳಮನಿ ಕಾರ್ಯಕ್ರಮ ನಿರೋಪಿಸಿದರೆ, ಸುಬಾನ್ ಸೈಯ್ಯದ್ ಸ್ವಾಗತಿಸಿದರು. ಮಂಜುನಾಥ ಡಗ್ಗಿ ವಂದಿಸಿದರು.
ಸಮಾವೇಷದಲ್ಲಿ ನಿರ್ಣಯ: ಶಿಕ್ಷಣದ ಕೇಸರಿಕರಣ ಖಾಸಗೀಕರಣ ವಿರೋಧಿಸಿ ಹಾಗೂ ಸರಕಾರಿ ಶಾಲಾ ಕಾಲೇಜುಗಳಿಗೆ ಮೂಲಸೌಲಭ್ಯಕ್ಕೆ ಆಗ್ರಹಿ ಫೆ. ೨೮ ರಂದು ಶಾಲಾ ಕಾಲೆಜ್ ಬಂದ್ ಮತ್ತು ಫೆ.೨೬ ಸೈಕಲ್ ಜಾಥಾ ಮಾಡಲು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
Please follow and like us:
error