೨೭ ರಂದು ಜಿಲ್ಲಾ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ

ಕೊಪ್ಪಳ ೨೫ : ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾ ಮುಖಂಡರ ಹಾಗೂ ಕಾರ್ಯಕರ್ತ ಸಭೆಯನ್ನು ದಿ ೨೭-೬-೧೨ರಂದು ಬುಧುವಾರ ಮಧ್ಯಾಹ್ನ ೩:೦೦ ಗಂಟೆಗೆ ನಗರದ ಹೊಟೇಲ್ ಹರ್ಷ ಸಭಾಂಗಣದಲ್ಲಿ ನಡೆಯಲಿದೆ. 
      ಈ ಸಭೆಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿಯಾದ ಹಾಗೂ ಮಾಜಿ ಸಂಸದ  ಕೆ.ವಿರುಪಾಕ್ಷಪ್ಪ, ರಾಜ್ಯ ವಕ್ತಾರರಾದ ವಾಯ್.ಎನ್.ಗೌಡ್ರು, ಜಿಲ್ಲಾ ಮುಖಂಡರಾದ ಕೆ.ಎಂ.ಸಯ್ಯದ್, ಟಿ.ರತ್ನಾಕರ,ಶಿವಪುತ್ರಪ್ಪ ಬೆಲ್ಲದ, ಪ್ರಭುಗೌಡ ಪಾಟೀಲ್, ಶರಣಪ್ಪ ಹೊಳಲಕೇರಿ, ಶಾಮಿದಸಾಬ ಕಿಲ್ಲೇದಾರ, ಭೂರೆಡ್ಡಪ್ಪ ಕನಕಗಿರಿ ಯಂಕಪ್ಪ ಕಾಶಪ್ಪನವರ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತ ಸಭೆಯಲ್ಲಿ ಪಾಲ್ಗೋಳ್ಳಲಿದ್ದಾರೆ.
 ಈ ಸಭೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಯಶಸ್ವಿಗೊಳಿಸಬೇಕೆಂದು ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಎಂ.ಸಯ್ಯದ್  ತಿಳಿಸಿದ್ದಾರೆ.

Related posts

Leave a Comment