ಯಡಿಯೂರಪ್ಪ ಯಾಕಾದ್ರೂ ಬರ್ತಾರಪ್ಪ ?

ಯಡಿಯೂರಪ್ಪ ಯಾಕಾದ್ರೂ ಬರ್ತಾರಪ್ಪ ಅಂತ ಕೊಪ್ಪಳದ ನಾಗರಿಕರು ಬೇಸರಪಟ್ಟುಕೊಳ್ಳುತ್ತಿದ್ದಾರೆ. ನವೆಂಬರ್ 12ರಂದು ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳ ತಾಯಂದಿರಿಗೆ ಸೀರೆ ವಿತರಣೆ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಪ್ಪಳಕ್ಕೆ ಆಗಮಿಸಲಿದ್ದಾರೆ.
ಅದಕ್ಕಾಗಿ ನಗರದಲ್ಲಿ ಮರಗಳ ಕಡಿಯುವುದು ನಡೆದಿದೆ. ರಸ್ತೆಯ ದೂಳನ್ನು ಏರ್ ಕಂಪ್ರೇಸರ್ ಮೂಲಕ ಧೂಳೆಬ್ಬಿಸಿದ್ದು ನಾಗರಿಕರು ಸಂಚರಿಸದಂತಾಗಿದ್ದು ಧೂಳಿನಿಂದ ರೋಸಿದ ಕೆಲವೆಡೆ ಖಾನಾವಳಿ, ಹೋಟೆಲ್ ಗಳು ಬಾಗಿಲು ಹಾಕಿದವು. ಮುಖ್ಯಮಂತ್ರಿ ಕಾರ್ಯಕ್ರಮದ ನೆಪದಲ್ಲಿ ಸರಕಾರಿ ಕಚೇರಿಗಳಲ್ಲಿ ನೌಕರರ ಗೈರು ಹಾಜರಿ ಕಂಡುಬಂದಿದ್ದು ನಾಗರಿಕರು ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ವ್ಯರ್ಥ ಅಲೆಯುವಂತಾಗಿದೆ .
Please follow and like us:
error