ಗಂಡುಗಲಿ ಕುಮಾರರಾಮ ನಾಟಕ

ಕೊಪ್ಪಳ :- ಶಿಕ್ಷಕರ ಕಲಾವೃಂದ ಮತ್ತು ಶ್ರೀ ಪಂಚಲಿಂಗೇಶ್ವರ ನಾಟ್ಯ ಸಂಘ ಗಿಣಗೇರಾ ಇವರು ದಿನಾಂಕ ೧೬/೦೬/೨೦೧೨ರಂದು ಶನಿವಾರ ಸಂಜೆ ೦೬ :೦೦ ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಗಂಡುಗಲಿ ಕುಮಾರರಾಮ ಎಂಬ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಿದ್ದಾರೆ. 
ರಂಗಭೂಮಿಯ ಹಿರಿಯ ಕಲಾವಿದನಾದ ಮಲ್ಲೇಶ ಅಮೀನಗಡ ಇವರ ಸಹಾಯಾರ್ಥವಾಗಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆದ್ದರಿಂದ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಭೂಮಿಯ ಬಡಕಲಾವಿದರಿಗೆ ಸಹಾಯ ಮಾಡಬೇಕೆಂದು ಶಿಕ್ಷಕರ ಕಲಾ ವೃಂದದ ವತಿಯಿಂದ ಕೋರಲಾಗಿದೆ. 
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ರಂಗಕರ್ಮಿ ದಾರವಾಡದ ರಂಗಾಯಣ ನಿರ್ದೆಶಕರಾಗಿದ್ದ ಏಣಿಗಿ ನಟರಾಜರಿಗೆ ಶದ್ಧಾಂಜಲಿ ಕಾರ್ಯಕ್ರಮವಿದೆ. ಮಾಹಿತಿಗಾಗಿ – ೯೯೦೨೮೯೩೬೭೧
Please follow and like us:
error