ಸಾಚಾರ್ ವರದಿಯ ಮುಖ್ಯ ಶಿಪಾರಸ್ಸುಗಳ ಜಾರಿಗೆ ಒತ್ತಡ ಹೇರಲು ಆಗ್ರಹ

ಎನ್‌ಎಂಡಿಎಫ್‌ಸಿಯ ದಕ್ಷಿಣ ಭಾರತದ ಸ್ವಯಂ ಸೇವಾ ಸಂಸ್ಥೆಗಳ ಕಾರ‍್ಯಾಗರವನ್ನು ಬೆಂಗಳೂರಿನ ದಿಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಾಗಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಅಲ್ಪಸಂಖ್ಯಾತರ ಖಾತೆ ಸಚಿವ ಕೆ.ರೆಹಮಾನ್‌ಖಾನ್ ಮತ್ತು ರಾಜ್ಯ ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆ ಸಚಿವ ಖಮರುಲ್ಲ ಇಸ್ಲಾಂ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು.

ಎನ್‌ಎಂಡಿಎಫ್‌ಸಿ ಎಂ.ಡಿ. ಯಶಫಾಲ್ ಸಿಂಗ್ ಸೇರಿದಂತೆ ಇತರ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಕೊಪ್ಪಳ ಜಿಲ್ಲೆಯಿಂದ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳಾಗಿ ಪಾಂಡುರಂಗ ಓಲೇಕಾರ,ರಾಜಾಬಕ್ಷಿ ಎಚ್.ವಿ., ಮೌಲಾಹುಸೇನ್ ಬುಲ್ದಿಯಾರ್, ನಬಿ ಕುಷ್ಟಗಿ, ಮುನೀರ್ ಸಿದ್ದಿಖಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಸೇವಾ ಸಂಸ್ಥೆಯ ರಾಜಾಬಕ್ಷಿ ಎಚ್.ವಿಯವರು ಸಾಚಾರ್ ಸಮಿತಿಯ ಮುಖ್ಯ ಶಿಫಾರಸ್ಸುಗಳನ್ನು ಇದುವರೆಗೆ ಯಾಕೆ ಜಾರಿ ಮಾಡಿಲ್ಲ ಎಂಬ ಪ್ರಶ್ನೆಯನ್ನು ಕೇಂದ್ರ ಸಚಿವ ಕೆ.ರೆಹಮಾನ್ ಖಾನ್‌ರೊಂದಿಗಿನ ಸಂವಾದದಲ್ಲಿ ಎತ್ತಿದರು. ೭೬ ಒಟ್ಟು ಶಿಪಾರಸ್ಸುಗಳಲ್ಲಿ ೬೬ ಶಿಫಾರಸ್ಸುಗಳು ಈಗಾಗಲೇ ಜಾರಿಯಲ್ಲಿದ್ದು. ಇನ್ನೂ ೩ ಸಧ್ಯದಲ್ಲಿಯೇ ಜಾರಿಯಾಗುತ್ತವೆ ಉಳಿದ ೭ ಶಿಫಾರಸ್ಸುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.
ಅಲ್ಪಸಂಖ್ಯಾತರ ಅಭಿವೃದ್ದಿಗೆ ಮುಖ್ಯವಾಗಿ ಬೇಕಾಗಿರುವ ಆ ಉಳಿದ ಶಿಫಾರಸ್ಸುಗಳನ್ನು ಶೀಘ್ರ ಜಾರಿ ಮಾಡುವಂತೆ ಮತ್ತು ಅವುಗಳ ಜಾರಿಗೆ ಒತ್ತಡ ಹೇರಲು ರಾಜಾಬಕ್ಷಿಯವರು ಮನವಿ ಮಾಡಿದರು.
ಗಂಗಾವತಿಯ ಶಾಹೀನ್ ಕೌಸರ್  ಅಲ್ಪಸಂಖ್ಯಾತರ ಸ್ವಯಂ ಸೇವಾ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಮಹಿಳಾ ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಆರ್ಥಿಕ ನೆರವು ನೀಡಲು ಆಗ್ರಹಿಸಿದರು. ಓಬೇದುಲ್ಲಾ  ಅಜ್ಮೀರ್ ದರ್ಗಾ ಕಮೀಟಿಯ ಅಧ್ಯಕ್ಷ, ಎಂಎಲ್ಸಿ ನಸೀರ್ ಅಹ್ಮದ್ , ಅಬ್ದುಲ್ ವಹಾಬ್ , ಇಲಾಖೆಯ ವಿವಿಧ ಕಾರ್ಯದರ್ಶಿಗಳು , ಮೌಲಾನಾ ಆಜಾದ್ ಸಂಸ್ಥೆಯ ಕಾರ್ಯದರ್ಶಿ ಅನ್ಸಾರಿ ಸೇರಿದಂತೆ  ಇತರರು ಉಪಸ್ಥಿತರಿದ್ದರ. 

Leave a Reply