ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರ ನಿರ್ಲಕ್ಷ- ಮಾಣಿಕ್ಯ.

 

ಕೊಪ್ಪಳ ೧೪, ೩೬ ಸಾವಿರ ಕೋಟಿ ಜನಸಂಖ್ಯೆ ಕೂಡಿದ ಉತ್ತರ ಕರ್ನಾಟಕದ ೧೬ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಕಾಂಗ್ರೇಸ್ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷಿಸಿವೆ. ಎಂದು ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಧ್ಯಕ್ಷೆ ಶ್ರೀಮತಿ ಮಾಣಿಕ್ಯ ಹಾವೇರಿ ಹೇಳಿದರು.

       ಅವರು ಶನಿವಾರ ನಡೆದ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ಸಂಜೀವಿನಿ ಆಸ್ಪತ್ರೆ ಜಿಂದಾಲ ಮತ್ತು ಜೆ.ಕೆ.ಎಸ್. ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೋರೆ ಶಸ್ತ್ರ ಚಿಕಿತ್ಸ ಶಿಬಿರದಲ್ಲಿ ಪಾಲ್ಗೊಂಡಿ ಮಾತನಾಡಿ ೨೦೦೫ ರಲ್ಲಿ ಪ್ರಾರಂಭಗೊಂಡ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ೨೦೦೬ ರಿಂದ ಬಸವನ ಬಾಗೆವಾಡಿಯಿಂದ ಆಲಮಟ್ಟಿವರೆಗೆ ಪಾದಯಾತ್ರೆ ಮಾಡಿ ವಿಜಯಪುರದಲ್ಲಿ ೩ಲಕ್ಷ ರೈತರೊಂದಿಗೆ ಸಮಾವೇಶ ನಡೆಸಿ ಕೃಷ್ಣಾ ಬಿ ಸ್ಕೀಮಿನ ನೀರಿನ ಬಳಕೆ ಮತ್ತು ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕೆಂದು ಹೋರಾಟ ನಡೆಸುತ್ತಾ ಬಂದಿದೆ. ೧೫೦ ರಿಂದ ೨೦೦ ವರೆಗೆ ರೈತರ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಾ ಬಂದು ಈ ಭಾಗದ ಹುಲಿಗಿಯಿಂದ ಐದು ಸಾರಿ ಪಾದಯಾತ್ರೆ ನಡೆಸಿ ತುಂಗಭದ್ರ ಹೂಳು ತೆಗೆಸಲು ಸರ್ಕಾರಕ್ಕ ಒತ್ತಾಯಿಸಿದ್ದೆವೆ. ಜಗತ್ತಿನಲ್ಲಿ ದುಡ್ಡಿನಿಂದ ಏನು ಬೇಕಾದರೂ ಕೊಳ್ಳಬಹುದು ಆದರೆ, ಜೀವನಕ್ಕೆ ಅತ್ಯಅವಶ್ಯವಾದ ಕಣ್ಣು, ಕಿವಿ, ಹೃದಯ, ಕಿಡ್ನಿ, ಮಾತ್ರ ಸಿಗುವುದಿಲ್ಲ. ಭೂಮಿಯನ್ನೇ ನಂಬಿ ಬದುಕುತ್ತೀರುವ ನಮ್ಮ ರೈತರ ಬಾಳು ಕತ್ತಲಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
       ರಾಜ್ಯಧ್ಯಕ್ಷ ಡಾ|| ಎಸ್.ಆರ್.ಸ್ವಾಮಿ ಮಾತನಾಡಿ ರೈತನ ಜೀವನಾಡಿಯಾಗಿರುವ ಭೂಮಿಯನ್ನೇ ನೋಡಿ ಬೆಳೆ ಬೆಳೆದು ದೇಶದ ಜನರಿಗೆ ಅನ್ನ ನೀಡುತ್ತೀದ್ದಾನೆ. ಇಂತ ರೈತರನ್ನು ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿ ರೈತರಿಗೆ ಸಿಗಬೇಕಾದ ಬೆಂಬಲ ಬೆಲೆ ಸಿಗುತ್ತೀಲ್ಲ. ಗ್ರಾಮಾಂತರ ಪ್ರದೇಶದ ರೈತರ ಜೀವನದ ಅವಿಭಾಜ್ಯ ಅಂಗವಾಗಿರುವ ತುಂಗಭದ್ರಾ ಜಲಾಶಯದ ಪ್ರದೇಶದಲ್ಲಿ ಪರಿಸರ ನಾಶ, ಪೋಷಕ ನಾಲೆಗಳ ಅತಿಕ್ರಮಣ, ತುಂಬಿದ ಹೂಳಿನಿಂದ ಇಂದು ರೈತನ ಜೀವನ ವಿನಾಶದ ಅಂಚಿಗೆ ಬಂದಿದೆ. ಜಲಾಶಯದ ಹೂಳೇತ್ತಲು ಈ ಭಾಗದ ರೈತರೊಂದಿಗೆ ಮತ್ತೆ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
        ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯವಹಿಸಿ ಆರ್ಶಿವಚನ ನೀಡಿದರು.   ವೇದಿಕೆಯ ಮೇಲೆ ಹಾವೇರಿ ಜಿಲ್ಲಾಧ್ಯಕ್ಷ ಜಿ.ಪಂ.ಸದಸ್ಯ ಬಸವರಾಜ ಬೆಳವಿನಹಳ್ಳಿ, ಜಗದೀಶಗೌಡ ಬಿರದಾರ, ಪ್ರಕಾಶ ಅರಳಳ್ಳಿ, ರಾಮನಗೌಡ್ರ ಹೀರೆಕೇರೂರ, ಜಿಂದಾಲನ ಡಾ|| ಕರ್ನಲ ಪಂಡಿತ, ಡಿ.ಕೆ.ಸಿಂಗ, ಗದಗ ಜಿಲ್ಲಾಧ್ಯಕ್ಷ ನಜೀರ ಮೂಲಿಮನಿ, ಕೊಪ್ಪಳ ಜಿಲ್ಲಾಧ್ಯಕ್ಷ ಮೋಹನಸಾ, ರಾಕೇಶ ಕಾಂಬ್ಳೆಕರ, ಸೇರಿದಂತೆ ಇನ್ನಿತರರು ಇದ್ದರು.
Please follow and like us:
error