ನೂತನ ಉಸ್ತುವಾರಿ ಸಚಿವರ ಬೆಂಗಾವಲು ಕಾರಿನಿಂದ ಅಪಘಾತ


ಕೊಪ್ಪಳ : ಕೊಪ್ಪಳ ಜಿಲ್ಲೆಗೆ ನೂತನ ಸಚಿವರಾಗಿ ಆಗಮಿಸಿದ್ದ ಶಿವನಗೌಡ ನಾಯಕರು ಕೆಡಿಪಿ ಸಭೆ ಮುಗಿಸಿಕೊಂಡು ಯಲಬುರ್ಗಾ ತೆರಳುವ ಸಂದರ್ಭದಲ್ಲಿ ಅವರ ಬೆಂಗಾವಲು ಪಡೆಗೆ ಸೇರಿದ್ದ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಶ್ರೀನಿವಾಸ್ ಕುಲಕರ್ಣಿ ಎಂಬ ವ್ಯಕ್ತಿಯ ಬೈಕ್ ಗೆ ಡಿಕ್ಕಿ ಹೊಡೆದ ಕಾರಿನ ಚಾಲನ ನಂತರ ಕಾರನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿದ್ದಾನೆ. ಖಾಸಗಿ ಕಾರ್ಖಾನೆಯಲ್ಲಿ ನೌಕರಸ್ಥರಾಗಿರುವ ಶ್ರೀನಿವಾಸ ಕುಲಕರ್ಣಿ ಗೆ ತೀವ್ರ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದ ನಂತರ ಶ್ರೀನಿವಾಸ ಕುಲಕರ್ಣಿ ಗಾಯದಿಂದ ನರಳುತ್ತಲೇ ತಮ್ಮ ಸಂಬಂಧಿಸಿದವರಿಗೆಲ್ಲಾ ಫೋನ್ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಅಂಬ್ಯುಲನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಾಯಿತು. ಅಪಘಾತ ಮಾಡಿ ನಂತರ ನಿಲ್ಲದೇ ಪರಾರಿಯಾದ ಸಚಿವರ ಬೆಂಗಾವಲು ಪಡೆಯ ಚಾಲಕನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Leave a Reply