ಕೊಪ್ಪಳ ಜಿಲ್ಲಾಧಿಕಾರಿ ಕಛೇರಿ ಎದುರು ಜಿಲ್ಲಾ ಬಿಜೆಪಿ ಘಟಕದಿಂದ ರೈತ ಅಧಿಕಾರ ದಿವಸ ಧರಣಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ರೈತ ಆತ್ಮಹತ್ಯೆಗೆ ಯತ್ನಿಸುತ್ತಿದ್ದರೂ ಸರ್ಕಾರಗಳು, ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ. ಈ ಕೂಡಲೇ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಮತ್ತು ರೈತರ ಸಮಸ್ಯೆಗಳನ್ನು ಈ ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಭಾರತೀಯ ಜನತಾ ಪಕ್ಷ ಘಟಕದಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬೆಳಿಗ್ಗೆ ೧೧-೦೦ ಗಂಟೆಗೆ ರೈತ ಅಧಿಕಾರ ದಿವಸ ಘೋಷಣೆಯೊಂದಿಗೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಭಾರತೀಯ ಜನತಾ ಪಕ್ಷ ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ. 
ರೈತರ ಪ್ರಮುಖ ಬೇಡಿಕೆಗಳಾದ ಡಾ|| ಸ್ವಾಮಿನಾಥನ್ ಆಯೋಗದ ವರದಿ ಯತವತ್ತಾಗಿ ಈ ಕೂಡಲೇ ಜಾರಿಗೆ ಬರಬೇಕು. ಕೇಂದ್ರ ಸರ್ಕಾರ ಪ್ರಕಟಿಸಿರುವ ರಾಸಾಯನಿಕ ಗೊಬ್ಬರದ ಅವೈಜ್ಞಾನಿಕ ಸಬ್ಸಡಿ ನೀತಿ ವಿರೋಧಿಸಿ, ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ೨೫೦೦ ರೂ. ಬೆಲೆ ನಿಗದಿ ಪಡಿಸಿ ೧೫೦ರೂ. ಬೆಂಬಲ ಬೆಲೆ ಸೇರಿಸಿ ೨೬೫೦ರೂ. ನೀಡುವುದಾಗಿ ಘೋಷಿಸಿದರೂ ಇದುವರೆಗೂ ಜಾರಿಗೆಯಾಗಿಲ್ಲ, ರಾಜ್ಯದಲ್ಲಿ ಸುಮಾರು ೧೨೦ ತಾಲೂಕುಗಳು ಬರಗಾಲ ಛಾಯೆಯಿಂದ ತತ್ತರಿಸುತ್ತಿದ್ದರೂ ಸರ್ಕಾರವು ಶಾಸಕರ ವಿದೇಶಿ ಯಾತ್ರೆ ನೆಪದಲ್ಲಿ ಮೋಜು ಮಾಡುತ್ತಿದೆ. ರಾಜ್ಯದಲ್ಲಿ ಅನೇಕ ಜಾನುವಾರುಗಳು ಕಾಲುಬೇನೆ ರೋಗದಿಂದ ಸಾಯುತ್ತಿದ್ದರೂ ಸಹ ಲಕ್ಷವಹಿಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ಸದಾ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರೂ ಪ್ರಯೋಜನವಿಲ್ಲದೆ ರೈತರು ವಿದ್ಯುತ್ ಅಭಾವದಿಂದ ಬೆಳೆದ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ತೊಗರೆ ಬೇಳೆ ಖರೀದಿಯಲ್ಲಿ ೧೦ ಜನರ ಗುಂಪಿನೊಂದರಂತೆ ಖರೀದಿಸಿ ಸಮಯ ವಿಳಂಬಿಸುತ್ತಿದ್ದಾರೆ. ಇನ್ನೂ ಮುಂತಾದ ರೈತರ ಸಮಸ್ಯೆಗಳೊಂದಿಗೆ ಕೊಪ್ಪಳ ಜಿಲ್ಲೆಯ ವರಧಾನವಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ, ಹಿರೇಹಳ್ಳ ಆಣೆಕಟ್ಟು ಎತ್ತರ ಹೆಚ್ಚಿಸಬೇಕು. ಕೊಪ್ಪಳ ತಾಲೂಕಿನ ಏತ ನೀರಾವರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಯತ್ನಟ್ಟಿ-ಭಾಗ್ಯನಗರ ಬ್ರಿಜ್ ಕಮ್ ಬ್ಯಾರೆಜ್ ಕಾಮಗಾರಿ ಶೀಘ್ರವೇ ಪ್ರಾರಂಭಿಸಬೇಕು ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕು. ಇನ್ನೂ ಹತ್ತಾರು ಸಮಸ್ಯೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಿಲ್ಲಾ ಭಾರತೀಯ ಜನತಾ ಪಕ್ಷದ ಮುಖಂಡರುಗಳು, ಪದಾಧಿಕಾರಿಗಳು ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. 
ಈ ಧರಣಿಯ ನೇತೃತ್ವವನ್ನು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ ವಹಿಸಲಿದ್ದಾರೆ. ಈ ಧರಣಿಯಲ್ಲಿ ಸಂಸದ ಶಿವರಾಮೇಗೌಡ ಶಾಸಕ ದೊಡ್ಡನಗೌಡ ಪಾಟೀಲ್ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಗಿರೇಗೌಡ್ರು ವಕೀಲರು, ಜಿಲ್ಲಾಧ್ಯಕ್ಷ ತಿಪ್ಪೆರುದ್ರಸ್ವಾಮಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಹೆಚ್ ಆರ್ ಚನ್ನಕೇಶವ, ಬಸವರಾಜ ದಡೇಸಗೂರ, ಕೊಲ್ಲಾಶೇಷಗಿರಿರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಗರಾವ್ ಕುಲಕರ್ಣಿ, ರಾಜು ಬಾಕಳೆ ಸೇರಿದಂತೆ ಮಹಿಳಾ ಘಟಕ, ರೈತ ಮೋರ್ಚಾ, ತಾಲೂಕ ಘಟಕದ ಅಧ್ಯಕ್ಷರು ಯುವ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಧರಣಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ ಮನವಿ ಮಾಡಿದ್ದಾರೆ.
Please follow and like us:
error

Related posts

Leave a Comment