ಹುಲಿಗೆಮ್ಮ ದೇವಸ್ಥಾನಕ್ಕೆ ಕಾಣಿಕೆ : ಭಕ್ತಾದಿಗಳಿಗೆ ಸೂಚನೆ- ಯಾವುದೇ ವ್ಯಕ್ತಿಗಳನ್ನು ನಿಯೋಜಿಸಿರುವುದಿಲ್ಲ.

  ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ಜಿಲ್ಲೆಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ದೇಣಿಗೆ ಅಥವಾ ಕಾಣಿಕೆ ಸಂಗ್ರಹಿಸಲು ಯಾವುದೇ ವ್ಯಕ್ತಿಗಳನ್ನು ನಿಯೋಜಿಸಿರುವುದಿಲ್ಲ.  ದೇವಸ್ಥಾನಕ್ಕೆ ದೇಣಿಗೆ ಅಥವಾ ಕಾಣಿಕೆ ಸಲ್ಲಿಸಬಯಸುವ ಭಕ್ತಾದಿಗಳು ದೇವಸ್ಥಾನದ ಕಚೇರಿಗೆ ಸಲ್ಲಿಸಿ ರಸೀದಿ ಪಡೆಯಬೇಕು ಅಥವಾ ದೇವಸ್ಥಾನದ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡಬಹುದಾಗಿದೆ ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.
  ಹುಲಿಗೆಮ್ಮ ದೇವಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ ’ಎ’ ವರ್ಗದ ಅಧಿಸೂಚಿತ ದೇವಸ್ಥಾನವಾಗಿದ್ದು, ರಾಜ್ಯಾದ್ಯಂತ ಹಾಗೂ ಆಂಧ್ರ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದಲೂ ಭಕ್ತರನ್ನು ಹೊಂದಿದೆ.  ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜಮೀನು ಖರೀದಿಸಿ, ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇಲಾಖೆಯು ಕ್ರಮ ಕೈಗೊಂಡಿದ್ದು, ದೇವಸ್ಥಾನದಲ್ಲಿ ಜರುಗುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು, ವಾರ್ಷಿಕ ಜಾತ್ರೆ, ನವರಾತ್ರಿ, ದಸರಾ, ಕಾರ್ತಿಕ ದೀಪೋತ್ಸವ, ಭಾರತ ಹುಣ್ಣಿಮೆ ಅಲ್ಲದೆ ದೈನಂದಿನ ಪೂಜೆಗಳನ್ನು ದೇವಸ್ಥಾನದ ವತಿಯಿಂದ ನಿರ್ವಹಿಸಲಾಗುತ್ತಿದೆ.  ಇದರ ಎಲ್ಲ ವೆಚ್ಚಗಳನ್ನು ದೇವಸ್ಥಾನದ ವತಿಯಿಂದಲೇ ಭರಿಸಲಾಗುತ್ತಿದೆ.  ಕೆಲವು ವ್ಯಕ್ತಿಗಳು ದೇವಸ್ಥಾನ ಅಥವಾ ದೇವರ ಹೆಸರಿನಲ್ಲಿ ಹಣ ಅಥವಾ ಕಾಣಿಕೆ ಸಂಗ್ರಹಿಸುತ್ತಿರುವುದಾಗಿ ದೂರುಗಳು ಕೇಳಿ ಬಂದಿದ್ದು, ಆದರೆ ದೇವಸ್ಥಾನದ ವತಿಯಿಂದ ಹಣ ಅಥವಾ ಕಾಣಿಕೆ ಸಂಗ್ರಹಣೆಗೆ ಯಾವುದೇ ವ್ಯಕ್ತಿಗಳನ್ನು ನಿಯೋಜಿಸಿರುವುದಿಲ್ಲ.  ಭಕ್ತಾದಿಗಳು ಯಾವುದೇ ವ್ಯಕ್ತಿಗೆ ಹಣ, ಒಡವೆ, ಧವಸಧಾನ್ಯ ಅಥವಾ ಕಾಣಿಕೆಗಳನ್ನು ಕೊಡದೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಕೊಟ್ಟು ಸೂಕ್ತ ರಸೀದಿ ಪಡೆದುಕೊಳ್ಳಬೇಕು.  ಅಥವಾ ದೇವಸ್ಥಾನದ ಬ್ಯಾಂಕ್‌ನ ಉಳಿತಾಯ ಖಾತೆಗಳಿಗೆ ಅಂದರೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹುಲಿಗಿ-ಮುನಿರಾಬಾದ್ ಶಾಖೆ ಖಾತೆ ಸಂಖ್ಯೆ- ೫೪೦೨೭೩೦೧೦೫೩ ಅಥವಾ ಸಿಂಡಿಕೇಟ್ ಬ್ಯಾಂಕ್, ಮುನಿರಾಬಾದ್ ಶಾಖೆಯ ಖಾತೆ ಸಂಖ್ಯೆ- ೨೨೦/೪೯೪೯ ಕ್ಕೆ ಸಂದಾಯ ಮಾಡುವಂತೆ ಹುಲಿಗೆಮ್ಮ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್  

ಮನವಿ ಮಾಡಿಕೊಂಡಿದ್ದಾರೆ.

Please follow and like us:
error