You are here
Home > Koppal News > ಅಬಕಾರಿ ಅಕ್ರಮ- ೪೦ ಪ್ರಕರಣ ದಾಖಲು, ೩೧ ಜನರ ಬಂಧನ

ಅಬಕಾರಿ ಅಕ್ರಮ- ೪೦ ಪ್ರಕರಣ ದಾಖಲು, ೩೧ ಜನರ ಬಂಧನ

 ವಿಧಾನಸಭಾ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ೪೦ ಪ್ರಕರಣಗಳನ್ನು ದಾಖಲಿಸಲಾಗಿದ್ದು, ೩೧ ಜನರನ್ನು ಬಂಧಿಸಿ, ೧೧೯. ೯೩೦ ಲೀ., ಅಕ್ರಮ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ.
  ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಮಾರ್ಚ್ ೨೦ ರಿಂದ ಇದುವರೆಗೂ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ೯೯ ಕಡೆ ದಾಳಿ ನಡೆಸಲಾಗಿದೆ.  ಈ ಪೈಕಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ೪೦ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ೩೧ ಜನರನ್ನು ಬಂಧಿಸಿ, ೧೧೯. ೯೩೦ ಲೀ. ಅಕ್ರಮ ಮದ್ಯ ಮತ್ತು ೫೭. ೩೫೦ ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ ಇದುವರೆಗೂ ೨೯ ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ೧೩ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿ, ೧೨ ಜನರನ್ನು ಬಂಧಿಸಲಾಗಿದೆ.  ಇದರಲ್ಲಿ ೪೧. ೬೭೦ ಲೀ. ಮದ್ಯ, ೩೨. ೬೫೦ ಲೀ. ಬಿಯರ್ ವಶಕ್ಕೆ ತೆಗೆದುಕೊಳ್ಳಲಾಗಿದೆ.  ಗಂಗಾವತಿ ತಾಲೂಕಿನಲ್ಲಿ ೪೧ ಕಡೆ ದಾಳಿ ನಡೆಸಲಾಗಿದ್ದು, ೧೯ ಪ್ರಕರಣಗಳನ್ನು ದಾಖಲಿಸಿ ೧೩ ಜನರನ್ನು ಬಂಧಿಸಲಾಗಿದೆ.  ಇದರಲ್ಲಿ ೯ ಲೀ. ಮದ್ಯ ಹಾಗೂ ೯. ೧೦೦ ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ.  ಕುಷ್ಟಗಿ ತಾಲೂಕಿನಲ್ಲಿ ೧೬ ಕಡೆ ದಾಳಿ ನಡೆದಿದ್ದು, ೬ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿ, ೦೪ ಜನರನ್ನು ಬಂಧಿಸಲಾಗಿದೆ.  ಇದರಲ್ಲಿ ೫೩. ೪೨೦ ಲೀ. ಅಕ್ರಮ ಮದ್ಯ ಮತ್ತು ೧೫. ೬೦೦ ಲೀ. ಬಿಯರ್ ವಶವಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ೧೩ ಕಡೆ ದಾಳಿ ನಡೆದಿದ್ದು, ೨ ಪ್ರಕರಣಗಳನ್ನು ದಾಖಲಿಸಿ, ಇಬ್ಬರನ್ನು ಬಂಧಿಸಲಾಗಿದೆ.  ಇದರಲ್ಲಿ ೧೫. ೮೪೦ ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
  ನೀತಿ ಸಂಹಿತೆ ಉಲ್ಲಂಘನೆ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಜಿಲ್ಲೆಯ ಯಲಬುರ್ಗಾ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

Leave a Reply

Top