ಡಿ.೨೧ ರಿಂದ ಚಳಿಗಾಲದ ವಿಶೇಷ ತರಬೇತಿ ಶಿಬಿರ

Koppal Sports
ಕೊಪ್ಪಳ ನ.   : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಆಶ್ರಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಚಳಿಗಾಲದ ವಿಶೇಷ ತರಬೇತಿ ಶಿಬಿರ ವನ್ನು ಬರುವ ಡಿಸೆಂಬರ್ ೨೧ ರಿಂದ ೩೦ ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರ ಆದೇಶದ ಮೇರೆಗೆ ಈ ತರಬೇತಿ ಶಿಬಿರದಲ್ಲಿ ವ್ಹಾಲಿಬಾಲ್, ಅಥ್ಲೆಟಿಕ್ಸ್, ಶೆಟಲ್ ಬ್ಯಾಡ್ಮಿಂಟನ್, ವೇಟ್ ಲಿಫ್ಟಿಂಗ್, ೫. ಖೋಖೋ ಕ್ರೀಡೆಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಕ್ರೀಡಾಪ್ರಾಧಿಕಾರದ ತರಬೇತಿದಾರರಿಂದ ವಿಶೇಷ ತರಬೇತಿ ನೀಡಲಾಗುವುದು. 
ಈ ತರಬೇತಿಗೆ ಜಿಲ್ಲೆಯಿಂದ ಶಾಲಾ ಅಥವಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಳ್ಳಬಹುದು. ತರಬೇತಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ  ಶಿಬಿರಾರ್ಥಿಯು ಕೂಡಾ ನಿರ್ವಹಣೆ ಶುಲ್ಕವಾಗಿ ರೂ. ೩೦೦ ಗಳನ್ನು ನೀಡಬೇಕಾಗುತ್ತದೆ. ಹಾಗೂ ಶಿಬಿರಾರ್ಥಿಗಳಿಗೆ ಕ್ರೀಡಾ ಸಲಕರಣೆಗಳನ್ನು ಇಲಾಖೆಯಿಂದ ಪೂರೈಸಲಾಗುವುದು.  ಹಾಗೂ ಪಾಲ್ಗೊಳ್ಳುವ ವಿದ್ಯಾರ್ಥಿ ಹಾಗೂ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ನ. ೩೦ ರೊಳಗಾಗಿ ತಮ್ಮ ಶಾಲಾ/ಕಾಲೇಜು ವಿದ್ಯಾರ್ಥಿಗಳ ಪಟ್ಟಿಯೊಂದಿಗೆ ಶುಲ್ಕವನ್ನು ಇಲಾಖೆಗೆ ಜಮಾ ಮಾಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಿ.ಎ.ಪಾಟೀಲ್ ವ್ಹಾಲಿಬಾಲ್ ತರಬೇತುದಾರರು ಭಾರತೀಯ ಕ್ರೀಡಾ ಪ್ರಾಧಿಕಾರ ಇವರ ಸೆಲ್ ೯೩೪೨೩೮೭೯೩೫ ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ  ತಿಳಿಸಿದೆ.

Leave a Reply