ಕೊಪ್ಪಳ ನಗರಸಭೆ ವಿವಿಧ ತರಬೇತಿಗೆ ಅರ್ಜಿ ಆಹ್ವಾನ.

ಕೊಪ್ಪಳ,
ಡಿ.೦೪ (ಕ ವಾ) ಕೊಪ್ಪಳ ನಗರಸಭೆ ಕಾರ್ಯಾಲಯದ ವತಿಯಿಂದ ಪ್ರಸಕ್ತ ಸಾಲಿನ
ನಲ್ಮ ಯೋಜನೆಯಡಿ ವಿವಿಧ ತಾಂತ್ರಿಕ ಮತ್ತು ಉದ್ಯೋಗಾಧಾರಿತ ತರಬೇತಿ ನೀಡಲು
ಉದ್ದೇಶಿಸಲಾಗಿದ್ದು, ಆಸಕ್ತ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
    
ಕೇಂದ್ರ ಪುರಸ್ಕೃತ ಯೋಜನೆಯಾದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರ
ಪ್ರದೇಶಗಳಲ್ಲಿರುವ ೧೮ ವರ್ಷ ಮೇಲ್ಪಟ್ಟ ವಯೋಮಿತಿಯ, ಬಡತನ ರೇಖೆಗಿಂತ ಕೆಳಗಿರುವ
(೨೩,೧೨೪ ರೂ.ಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ) ಅಭ್ಯರ್ಥಿಗಳಿಗೆ ಉದ್ಯೋಗ
ಮತ್ತು ತರಬೇತಿ ಇಲಾಖೆಯ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹಾಗೂ ಆರ್.ಸೆಟಿ, ಕೈಮಗ್ಗ
ಮತ್ತು ಜವಳಿ ಇಲಾಖೆ ಕಟ್ಟಡ ನಿರ್ಮಾಣ ಕಾರ್ಮಿಕರ ತರಬೇತಿ ಅಕಾಡೆಮಿ ಇವರುಗಳ ಮೂಲಕ
ಬೇಸಿಕ್ ಕಾರ್ಪೆಂಟರ್, ಬಾರ್ ಬೆಂಡರ್, ಫ್ಲಂಬರ್, ಹೌಸ್ ವೈರಿಂಗ್, ಮೊಬೈಲ್ ಫೋನ್
ರಿಪೇರಿ, ಬೇಸಿಕ್ ಬುಕ್ ಬೈಂಡಿಂಗ್, ಪೇಪರ್ ಪ್ಲೇಟ್ಸ್ ಮೇಕಿಂಗ್, ವಾಲ್ ಸ್ಪ್ರೇ
ತರಬೇತಿ, ವೆಲ್ಡಿಂಗ್, ಫಿಟ್ಟರ್ ಇತರೆ ತಾಂತ್ರಿಕ ತರಬೇತಿಗಳನ್ನು ಉಚಿತವಾಗಿ
ನೀಡಲಾಗುವುದು.
     ಆಸಕ್ತ ಬಿಪಿಎಲ್ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು
ಪಡೆದು, ಭರ್ತಿ ಮಾಡಿ, ಚಾಲ್ತಿ ವರ್ಷದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ವಿದ್ಯಾರ್ಹತೆಯ ಬಗ್ಗೆ ದಾಖಲಾತಿಗಳು, ೩ ವರ್ಷಗಳ ಕಾಲ ನಿವಾಸಿಯಾಗಿರುವುದಕ್ಕೆ ಪಡಿತರ
ಚೀಟಿ, ಚುನಾವಣಾ ಗುರುತಿನ ಚೀಟಿ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಡಿ.೨೦ ರೊಳಗಾಗಿ
ಕೊಪ್ಪಳ, ನಗರಸಭೆ ಕಾರ್ಯಾಲಯದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವಿಭಾಗದಲ್ಲಿ
ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ತಿಳಿಸಿದ್ದಾರೆ.   
ಡಿ.೧೨ ರಿಂದ ವಿಜಯಪುರದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ.
ಕೊಪ್ಪಳ,
ಡಿ.೦೪ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ
ಸಾಲಿನ ರಾಜ್ಯ ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನದ ಗ್ರಾಮೀಣ ಕ್ರೀಡಾಕೂಟ ಗುಂಪು ೦೩ ರ
ಹ್ಯಾಂಡ್‌ಬಾಲ್ ಹಾಗೂ ಫುಟ್‌ಬಾಲ್ ಕ್ರೀಡೆಗಳನ್ನು ಡಿ.೧೨ ರಿಂದ ಡಿ.೧೪ ರವರೆಗೆ
ವಿಜಯಪುರದ ಡಾ||ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
    
ಕೊಪ್ಪಳ ಜಿಲ್ಲಾ ಮಟ್ಟದ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿ ವಿಜೇತರಾದಂತಹ
ಕ್ರೀಡಾಪಟುಗಳು ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ
ಭಾಗವಹಿಸುವ ಜಿಲ್ಲೆಯ ಕ್ರೀಡಾಪಟುಗಳು ಡಿ.೧೨ ರಂದು ಮಧ್ಯಾಹ್ನ ೦೨.೦೦ ಗಂಟೆಯೊಳಗಾಗಿ
ವಿಜಯಪುರದ ಡಾ||ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು
ಹಾಗೂ ಜಿಲ್ಲಾ ತಂಡದ ಧ್ವಜದೊಂದಿಗೆ ಸಂಜೆ ೦೪.೦೦ ಗಂಟೆಗೆ ನಡೆಯಲಿರುವ ಪಥಸಂಚಲನದಲ್ಲಿ
ಖಡ್ಡಾಯವಾಗಿ ಭಾಗವಹಿಸಬೇಕು. ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ ಭಾಗವಹಿಸುವ
ಕ್ರೀಡಾಪಟುಗಳಿಗೆ ವಿಜಯಪುರ ಜಿಲ್ಲೆಯಲ್ಲಿ ಸಾಮಾನ್ಯ ವಸತಿ ಮತ್ತು ಉಟೋಪಹಾರದ
ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕ್ರೀಡಾಪಟುಗಳು ಲಘು ಹಾಸಿಗೆ, ಹೊದಿಕೆಗಳನ್ನು ಹಾಗೂ
ನಿಗದಿತ ನಮೂನೆಯಲ್ಲಿ ತಮ್ಮ ಜನ್ಮ ದಿನಾಂಕ ಪ್ರಮಾಣ ಪತ್ರ, ಐ.ಡಿ ಕಾರ್ಡ್, ಬ್ಯಾಂಕ್
ಖಾತೆಯ ನಂಬರ್ ಹಾಗೂ ವಿಳಾಸದೊಂದಿಗೆ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಹೋಗಬೇಕು. 
    
ಜಿಲ್ಲೆಯಿಂದ ಭಾಗವಹಿಸುವ ಸ್ಪರ್ಧಿಗಳಿಗೆ ಕೊಪ್ಪಳದಿಂದ ವಿಜಯಪುರ ಜಿಲ್ಲೆಯವರೆಗೆ ಹೋಗಿ
ಬರುವ ಸಾಮಾನ್ಯ ಬಸ್ ದರವನ್ನು ಕ್ರೀಡಾಕೂಟ ಮುಕ್ತಾಯವಾದ ದಿನದಂದು ಜಿಲ್ಲೆಯ
ಮೇಲ್ವಿಚಾರಕರಿಂದ ಪಾವತಿಸುವ ವ್ಯವಸ್ಥೆ ಮಾಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ
ಕಛೇರಿ ದೂರವಾಣಿ ಸಂಖ್ಯೆ: ೦೮೫೩೯-೨೦೧೪೦೦ ನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಡಾ||ಶಾರದಾ ನಿಂಬರಗಿ ಅವರು ತಿಳಿಸಿದ್ದಾರೆ.  
Please follow and like us:
error