fbpx

ಬಿನ್ನಾಳದಲ್ಲಿ ’ಸಾವಿರದ ವಿವೇಕಾನಂದ’ ಕಾರ್ಯಕ್ರಮ ಯಶಸ್ವಿ

ಕೊಪ್ಪಳ : ಯುವ ಬ್ರಿಗೇಡ್ ಸಂಘಟನೆಯು ೨೦೧೫ ರ ಜನವರಿ ೧೨ ರಂದು ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಸ್ವಾಮಿ ವಿವೇಕಾನಂದರ ೧೫೨ ನೇ ಜಯಂತಿಯನ್ನು ಸಾವಿರದ ವಿವೇಕಾನಂದ ಎಂಬ ವಿಶೇಷ ಶಿರ್ಷಿಕೆಯಡಿ ಆಚರಿಸಲು ನಿಶ್ಚಯಿಸಿತ್ತು. 
ಕೊಪ್ಪಳ ಜಿಲ್ಲೆಯ ಯುವ ಬ್ರಿಗೆಡ್ ಸಂಘಟನೆಯ ಸದಸ್ಯರು  ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ’ಸಾವಿರದ ವಿವೇಕಾನಂದ’ ಕಾರ್ಯಕ್ರಮ ಆಯೀಜಿಸಿ ಯಶಸ್ವಿಗೊಳಿಸದರು. 
ಕಾರ್ಯಕ್ರಮದಲ್ಲಿ ಸಂಘಟನೆಯ ಉಸ್ತುವಾರಿ ವಹಿಸಿದ್ದ ಜಗದೀಶ ಚಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಸಮಾನ ಮನಸ್ಕ ರಾಷ್ಟ್ರ ಪ್ರೇಮಿ ಯುವಕರ ಸಂಘಟನೆಯೇ ಈ ’ಯುವ ಬ್ರಿಗೇಡ್’ ಕಾರ್ಯಕ್ರಮಗಳನ್ನು ವಿವರಿಸಿದರು. ಚಕ್ರವರ್ತಿ ಸೂಲಿಬೆಲೆಯವರ ಕಾರ್ಯಾಧ್ಯಕ್ಷತೆಯಲ್ಲಿ ಸಂಘಟನೆಗೊಂಡ ಈ ಯುವ ಬ್ರಿಗೇಡ್ ದೇಶಕ್ಕೆ ಸದೃಡ ಯುವಕರನ್ನು ನಿರ್ಮಾಣ ಮಾಡಿ ಸದೃಡ ಭಾರತವನ್ನು ನಿರ್ಮಾಣ ಮಾಡುವುದಾಗಿದೆ ಎಂದು ವಿವರಿಸಿದರು. 
ಇನ್ನೋರ್ವ ಸದಸ್ಯ ಶಿವಕುಮಾರ ಮುತ್ತಾಳ ಮಾತನಾಡಿ ಸ್ವಾಮಿ ವಿವೇಕಾನಂದರಿಗೆ ಸಾವಿಲ್ಲ, ಅವರು ತಮ್ಮ ತತ್ವ, ಆದರ್ಶ, ಆದ್ಯಾತ್ಮಗಳಿಂದ ನಮ್ಮಲ್ಲಿ ಸದಾ ಜಾಗೃತರಾಗಿದ್ದಾರೆ. ಅವರ ಜೀವನ, ಅವರ ವಿಚಾರದಾರೆ, ಅವರ ದೂರ ದೃಷ್ಠಿ, ಅವತ್ತಿಗೂ ಇವತ್ತಿಗೂ ಭಾರತವನ್ನು ಬೆಳಗಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಇನ್ನಿತರ ಪದಾಧಿಕಾರಿಗಳಾದ ಚನ್ನಬಸವ ಮೇಣಸಿನಕಾಯಿ, ಮಂಜುನಾತ ಚಟ್ಟಿ, ಅಂದಪ್ಪ ಬಂಡ್ರಿ, ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಸಂಗಪ್ಪ ಕಿಂದರಿ, ಶಿಕ್ಷಕರಾದ ಶ್ರೀಮತಿ ಸಾವಿತ್ರಿ ತಟ್ಟಿ, ಗುರಪ್ಪ ಪತ್ತಾರ, ಮಹಾದೇವಪ್ಪ ಹರಿಜನ, ಸ್ವೇತಾ ಕಲಕೇರಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!