ಜ.೨೦ ರಿಂದ ಚಿಕ್ಕೋಡಿಯಲ್ಲಿ ಸೇನಾಭರ್ತಿ ರ‍್ಯಾಲಿ

  ಭಾರತೀಯ ಸೇನೆಗೆ ಜ.೨೦ ರಿಂದ ೩೦ ರವರೆಗೆ ಸೇನಾ ಪಡೆ ಭರ್ತಿ ರ‍್ಯಾಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೆಎಲ್‌ಇ ಕ್ಯಾಂಪಸ್ ಬಿ.ಕೆ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಆಸಕ್ತ ಯುವಕರು ಈ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.
  ಬೆಂಗಳೂರಿನ ನೇಮಕಾತಿ ವಲಯ ಹೆಡ್‌ಕ್ವಾರ್ಟರ್ಸ ಮತ್ತು ಬೆಳಗಾವಿಯ ಸೈನ್ಯ ನೇಮಕಾತಿ ಕಛೇರಿ ಇವರ ವತಿಯಿಂದ ಉತ್ತರ ಕರ್ನಾಟಕದ ಬೆಳಗಾವಿ, ಕೊಪ್ಪಳ, ಬಳ್ಳಾರಿ, ಬೀದರ್, ರಾಯಚೂರು  ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಶ್ವತವಾಗಿ ವಾಸಿಸುವ ಪುರುಷ ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಾಗಿ ಆಯ್ಕೆ ಮಾಡಲಾಗುವುದು.
ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳಿಗೆ ಜ.೨೦ ರಂದು ಸೈನಿಕ ಲಿಪಿಕ ಹಾಗೂ ಉಗ್ರಾಣ ಪಾಲಕ ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ರ‍್ಯಾಲಿ ನಡೆಯಲಿದ್ದು, ಹದಿನೇಳುವರೆ ವರ್ಷದಿಂದ ೨೩ ವರ್ಷ ವಯಸ್ಸಾಗಿರಬೇಕು (೨೦-ಜನೇವರಿ ೯೧ ರಿಂದ ೨೦ ಜುಲೈ ೯೬) ಬೇಳಗಾವಿ, ಬಳ್ಳಾರಿ, ಬೀದರ, ಗುಲ್ಬರ್ಗಾ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳನ್ನು ಆಯ್ಕೆ ನಡೆಯಲಿದೆ. ಹಾಗೂ ಡಿ.ಎಸ್ಸ.ಸಿ (ಮಾಜಿ ಸೈನಿಕರಿಗೆ ಮಾತ್ರ) ೪೮ ವರ್ಷದವರೆಗೆ ಮಾತ್ರವಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. 
ಜ.೨೮ ರಂದು ಸೈನಿಕ ಸಾಮಾನ್ಯ ಕರ್ತವ್ಯ ಹುದ್ದೆಗೆ ನೇಮಕಾತಿ ಜರುಗಲಿದ್ದು, ಹದಿನೇಳುವರೆ ವರ್ಷದಿಂದ ೨೧ ವರ್ಷ ವಯಸ್ಸಾಗಿರಬೇಕು (೨೦-ಜನೇವರಿ ೯೩ ರಿಂದ ೨೦ ಜುಲೈ ೯೬) ಬಳ್ಳಾರಿ, ಬೀದರ, ಗುಲ್ಬರ್ಗಾ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಹಾಗೂ ಸೈನಿಕ ಟ್ರೇಡ್ಸ್‌ಮನ್ ಹುದ್ದೆಗೆ ಹದಿನೇಳುವರೆ ವರ್ಷದಿಂದ ೨೩ ವರ್ಷ ವಯಸ್ಸಾಗಿರಬೇಕು (೨೦-ಜನೇವರಿ ೯೧ ರಿಂದ ೨೦ ಜುಲೈ ೯೬), ಬೆಳಗಾವಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.  
ಜ.೩೦ ರಂದು ಸೈನಿಕ ಲಿಪಿಕ/ಹಾಗೂ ಸೈನಿಕ ಶುಶ್ರೂಷಾ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಹದಿನೇಳುವರೆ ವರ್ಷದಿಂದ ೨೩ ವರ್ಷ ವಯಸ್ಸಾಗಿರಬೇಕು (೨೦-ಜನೇವರಿ ೯೧ ರಿಂದ ೨೦ ಜುಲೈ ೯೬), ಬೆಳಗಾವಿ, ಬಳ್ಳಾರಿ, ಬೀದರ, ಗುಲಬರ್ಗಾ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ ಹಾಗೂ ಆರ್ಟಿ ಜೆಸಿಓ ಹುದ್ದೆಗೆ ೨೭ ರಿಂದ ೩೪ ವರ್ಷ ಸಿವಿಲ್ ಅಭ್ಯರ್ಥಿಗಳಿಗೆ (೨೦-ಜನೇವರಿ ೧೯೮೦ ರಿಂದ ೨೦-ಜನೇವರಿ ೧೯೮೭) ಹಾಗೂ ೨೫ ರಿಂದ ೩೪ ವರ್ಷ ರಿಮಸ್ಟರಿಂಗ್ ಅಭ್ಯರ್ಥಿಗಳಿಗೆ (೨೦-ಜನೇವರಿ ೧೯೮೦ ರಿಂದ ೨೦-ಜನೇವರಿ ೧೯೮೯), ರಾಜ್ಯದ ಎಲ್ಲ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
  ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವಿ ಮುಂತಾದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುವುದು.  ಅಭ್ಯರ್ಥಿಗಳನ್ನು ದೇಹದಾರ್ಢ್ಯತೆ ಮತ್ತು ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
 ಆಯ್ಕೆಯ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಯಾವುದೇ ವದಂತಿಗಳಿಗೆ ಅಭ್ಯರ್ಥಿಗಳು ಕಿವಿಗೊಡಬಾರದು.  ಒಂದು ವೇಳೆ ನೇಮಕಾತಿ ಮಾಡಿಸುವುದಾಗಿ ಯಾರಾದರೂ   ಸಂಪರ್ಕಿಸಲು ಪ್ರಯತ್ನಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. 
ಹೆಚ್ಚಿನ ಮಾಹಿತಿಗಾಗಿ  ಸೈನಿಕ ನೇಮಕಾತಿ ಕಛೇರಿ, ಬೆಳಗಾವಿ ದೂರವಾಣಿ ಸಂಖ್ಯೆ: ೦೮೩೧೨೪೬೫೫೫೦ ಹಾಗೂ ಐವಿಆರ್‌ಎಸ್ಸ್ ಸಂಖ್ಯೆ: ದೂರವಾಣಿ  ಸಂಖ್ಯೆ  ೦೮೦ ೨೫೫೯೯೨೯೦ ಅಥವಾ ವೆಬ್‌ಸೈಟ್ www.zrobangalore.gov.inಗೆ  ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply