ರೈತನಿಗೆ ೫೦೦೦ರೂ ಗಳ ಚೆಕ್‌ಯನ್ನು ೬೯ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ನೀಡಲಾಯಿತು.

ಗದಗ – 15 ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯ ಕಛೇರಿಯಲ್ಲಿ ಬಡ ರೈತನಿಗೆ ೫೦೦೦ರೂ ಗಳ ಚೆಕ್ ಅನ್ನು ೬೯ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ವೇದಿಕೆಯ ರಾಜ್ಯದ್ಯಕ್ಷರಾದ ಶ್ರೀ ಸಯ್ಯದ ಖಾಲೀದ ಕೊಪ್ಪಳರವರು ನಸರತ್ ಎಂಬುವ ರೈತನಿಗೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೇವಲ ಭಾಷಣದಲ್ಲಿ ರೈತರ ಬಗ್ಗೆ ಹೊಗಳಿದರೆ ಅಲ್ಲ ಸಮರ್ಪಕ ಸಮಯದಲ್ಲಿ ರೈತರಿಗೆ ಸರ್ಕಾರ ಪರಿಹಾರ ನೀಡುವ ಮುಖಾಂತರ ರೈತನಿಗೆ ಬೆನ್ನೆಲುಬು ಆಗಬೇಕು ಎಂದು ವೇದಿಕೆಯ ರಾಜ್ಯದ್ಯಕ್ಷರಾದ ಶ್ರೀ ಸಯ್ಯದ ಖಾಲೀದ ಕೊಪ್ಪಳರವರು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಅಧ್ಯಕ್ಷರಾದ ಪೂಜಾ ಬೇವೂರ, ಶಾಖೀರ ಕೌತಾಲ, ಸಮೀರ ಮುಳಗುಂದ, ಮಹಿಳಾ ಘಟಕದ ಜಿಲ್ಲಾದ್ಯಕ್ಷರಾದ ಶ್ರೀಮತಿ ಶಕುಂತಲಾ ಜಿ, ನಿರ್ಮಲಾ ಬಿರಾದಾರ, ಸುಮಾ ಶಿಂಧೆ, ಸರೋಜಾ ಕೊಲ್ಲಾಪುರೆ, ಗೀತಾ ಇಂಗಳೆ, ರವಿ ವಗ್ಗನವರ, ಚಾಂದಸಾಬ, ಅನಿಲ ಸುಣಗಾರ, ಮಾಂತೇಶ ಅಂಗಡಿ, ಗಿರೀಶ ಕಾರಬಾರಿ ಮುಂತಾದವರು ಉಪಸ್ಥಿತರಿದ್ದರು.

Please follow and like us:
error