೨೪ ದಿನಗಳ ರೇಲ್ವೇ ಧರಣಿ ಸತ್ಯಾಗ್ರಹ ವಾಪಾಸ್

 ಡಿಸೆಂಬರ್ ೧ ರಿಂದ ಸತತ ೨೪ ದಿನಗಳ ಕಾಲ ದನಕನದೊಡ್ಡಿ-ಬೂದಗುಂಪಾ-ಅಮರಾಪೂರ ನೂರಾರು ರೈತರು ರೇಲ್ವೇ ಮಾರ್ಗ ನಿರ್ಮಾಣ ಕಾಮಗಾರಿ ತಡೆದು ಆಹೋರಾತ್ರಿ ಧರಣಿ ನಡೆಸಿ ಮೊದಲ ಮತ್ತು ಹೆಚ್ಚುವರಿಯಾಗಿ ಭೂಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಬೇಕೆಂದು, ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡಬೇಕೆಂದು, ಜೆಎಂಸಿ ಸರ್ವೇ ವರದಿ ಸರಿಪಡಿಸಬೇಕೆಂದು, ಹಳಿಗುಂಟ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕೆಂದು ಹಾಗೂ ಆಯಾ ಗ್ರಾಮ ಸೀಮಾದ ರಸ್ತೆ ವೈವಾಟಿಗಾಗಿ ಕೆಳಸೇತುವೆ ನಿರ್ಮಾಣ ಮಾಡಬೇಕೆಂದು ಹಕ್ಕೊತ್ತಾಯ ಮಾಡಲಾಗಿತ್ತು. 
  ಬೂದಗುಂಪಾ-ಅಮರಾಪುರದ ೨೨ ಜನ ರೈತರಿಗೆ ಹಾಗೂ ದನಕನದೊಡ್ಡಿಯ ೧೮ ಜನ ರೈತರಿಗೆ ಹೆಚ್ಚುವರಿ ಭೂಸ್ವಾಧೀನ ಮಾಡಿದ ರೈತರಿಗೆ ಚೆಕ್ ವಿತರಿಸುವ ನೋಟಿಸ್ ನೀಡಿದ್ದು, ಇನ್ನು ಬೂದಗುಂಪಾದ ೪ ಜನ ರೈತರಿಗೆ ಹಾಗೂ ದನಕನದೊಡ್ಡಿಯ ೬ ರೈತರಿಗೆ ನೋಟಿಸ್ ನೀಡಿಲ್ಲ. ತಪ್ಪಾದ ಜೆಎಂಸಿ ವರದಿ ಸರಿಪಡಿಸಲು ೩ ದಿನಗಳ ಗಡವು ನೀಡಿದ್ದು, ಸಂಪರ್ಕ ರಸ್ತೆಗಳ ಮತ್ತು ಕೆಳಸೇತುವೆ ನಿರ್ಮಾಣ ಮಾಡುವ ಕಾಮಗಾರಿ ಆರಂಭಿಸಿದ್ದು, ಪ್ರತಿಶತ ೮೦ ರಷ್ಟು ಬೇಡಿಕೆಗಳು ಈಡೇರಿದ್ದು, ಮೊದಲನೇ ಕಂತಿನ ಹಣವನ್ನು ನ್ಯಾಯಾಲಯದಲ್ಲಿ ಜಮಾವಣೆ ಮಾಡಲು ಒಪ್ಪಿಕೊಂಡಿದ್ದು, ಭೂ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ನೀಡುವ ಭರವಸೆಯನ್ನು ಉಪಮುಖ್ಯ ಇಂಜಿನಿಯರರಾದ ಎಂ.ವಿ.ಚಲಪತಿರಾವ್, ಕಾರ್ಯನಿರ್ವಾಹಕ ಇಂಜಿನಿಯರ್ ಶಿವಕುಮಾರ್ ರವರು ಜಂಟಿಯಾಗಿ ಧರಣಿ ಬಿಡಾರಕ್ಕೆ ಆಗಮಿಸಿ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ೧ ವಾರದ ಗಡುವು ನೀಡಿ ಹೋರಾಟವನ್ನು ಹಿಂದಕ್ಕೆ ಪಡೆಯಲಾಯಿತು. ಒಂದು ವೇಳೆ ವಾರದೊಳಗೆ ರೈತರ ಬೇಡಿಕೆ ಈಡೇರದಿದ್ದಲ್ಲಿ ರೇಲ್ವೇ ಹಳಿ ಮೇಲೆ ವಾಸ್ತವ್ಯ ಹೂಡುವ ಹೋರಾಟಕ್ಕೆ ಮುಂದಾಗುತ್ತೇವೆ ಎನ್ನುವ ತೀರ್ಮಾನದೊಂದಿಗೆ ಹೋರಾಟಕ್ಕಾಗಿ ಶ್ರಮಿಸಿದ ಮತ್ತು ಸುದ್ದಿ ಪ್ರಚುರಪಡಿಸಿದ ಮಾದ್ಯಮ ಮಿತ್ರರಿಗೆ ಅಭಿನಂದನೆಗಳನ್ನು ಇದೇ ಸಂದರ್ಭದಲ್ಲಿ ಸಲ್ಲಿಸಿ ಹೋರಾಟವನ್ನು ಹಿಂಪಡೆಯಲಾಯಿತು.   
                          
              ಈ ಸಂದರ್ಭದಲ್ಲಿ ಜಿಲ್ಲಾಧದ್ಯಕ್ಷರಾದ ಹನುಮಂತಪ್ಪ ಹೊಳೆಯಾಚೆ , ನಿಂಗನಗೌಡ ಗ್ಯಾರಂಟಿ, ತಾಲೂಕ ಕಾರ್ಯದರ್ಶಿ ಗವಿಸಿದ್ದಪ್ಪ ಡೊಳ್ಳಿನ, ತಾಲೂಕಾಧ್ಯಕ್ಷ ಶಿವಣ್ಣ.ಬಿ.ಇಂದರಿಗಿ, ಸಿಪಿಐ(ಎಂಲ್) ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಗೋನಾಳ್, ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯ ಹನುಮೇಶ ಕವಿತಾಳ, ರೈತರಾದ ಪಕೀರಪ್ಪ ಕುಷ್ಟಗಿ, ನಿಂಗಪ್ಪ ಕುಷ್ಟಗಿ, ಕರಿಯಪ್ಪ ಕೊಳ್ಳಿ, ಸೋಮವ್ವ ಬೆಟಗೆರಿ, ಪಾರ್ವತಮ್ಮ ಮಡಿವಾಳ, ಕರಿಯಮ್ಮ ಸಂಗ್ಟಿ ಹಾಗೂ ಶಾಖಾ ಇಂಜಿನಿಯರ್ ಎಚ್.ಎಸ್.ಮನಸೂರ್, ಗ್ರಾಮ ಲೆಕ್ಕಾಧಕಾರಿ ಈಶ್ವರಪ್ಪ, ತಾಲೂಕ ಸರ್ವೇಯರ್ ನಟರಾಜ್ ಇದ್ದರು.                                               

Leave a Reply