ಕೊಪ್ಪಳ ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ

ಕೊಪ್ಪಳ :  ನಗರದ ಸಾರ್ವಜನಿಕ ಮೈದಾನದಲ್ಲಿ ಕಾಂಗ್ರೆಸ್ ನ ಪ್ರಚಾರ ಕಾರ್ಯಕ್ರಮದಲ್ಲಿ ಈ ಮಾತನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.  ಕೋಟ್ಯಾಂತರ ರೂಪಾಯಿ ಲೂಟಿ ಮಾಡಿ ಕೋರ್ಟನಲ್ಲಿ ನಿಲ್ಲುವ ಮೂಲಕ ರಾಜ್ಯದ ಘನತೆಗೆ ಬಿಜೆಪಿ ಸರಕಾರ ದಕ್ಕೆ ತಂದಿದೆ ಎಂದು ಹೇಳಿದರು. ಬಿಜೆಪಿಯ ವಿರುದ್ದ ಹರಿಹಾಯ್ದ  ಕಾಂಗ್ರೆಸ್ ನಾಯಕರು  ಸಾರ್ವತ್ರಿಕ ಚುನಾವಣೆ ಗೆ ಸೆಮಿಪೈನಲ್  ಮ್ಯಾಚಿದು ಎಂದು ಹೇಳಿದರು.  ಪ್ರಜ್ಞಾವಂತರು ಈ ಚುನಾವಣೆಯ ಮೂಲಕ ರಾಜ್ಯಕ್ಕೆ ಸಂದೇಶ ನೀಡಬೇಕಿದೆ.  ಆಪರೇಷನ್ ಕಮಲದಿಂದ ಚುನಾವಣೆಗೆ ಕಾರಣರಾದ ಸಂಗಣ್ಣ ಕರಡಿಯವರನ್ನ ತಿರಸ್ಕರಿಸ ಬೇಕು ಎಂದು ಕರೆ ನೀಡಿದರು. 
         ಡಾ.ಜಿ.ಪರಮೇಶ್ವರ, ಎಚ್.ಕೆ.ಪಾಟೀಲ್,  ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ ಮಾತನಾಡಿದರು. ವೇದಿಕೆಯ ಮೇಲೆ ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ, ಸಿ.ಎಂ.ಇಬ್ರಾಹಿಂ,ಡಿ.ಎಕೆ.ಶಿವಕುಮಾರ,ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ ಮತ್ತಿತರರು ಉಪಸ್ಥಿತರಿದ್ದರು
Please follow and like us:
error