ನಗರದ ಬಾಲಕೀಯರ ಬಾಲ ಮಂದಿರ ದಲ್ಲಿ ಹಾಲು ಮತ್ತು ಹಣ್ಣು ವಿತರಿಸಿ ಅಟಲ ಬಿಹಾರಿ ವಾಜಪೇಯಯವರ ಜನ್ಮದಿನೋತ್ಸವ ಆಚರಿಸಲಾಯಿತು.

ಜಿಲ್ಲಾ ಯುವಮೋರ್ಚಾದ ವತಿಯಿಂದ ನಗರದಲ್ಲಿ ಜನ್ಮ ದಿನೋತ್ಸವ ಬಾಲಕೀಯರ ಬಾಲ ಮಂದಿರ ದಲ್ಲಿ ಹಾಲು ಮತ್ತು ಹಣ್ಣು ವಿತರಿಸಿ  ಆಚರಿಸಲಾಯಿತು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಟರಾದ ಮಂಜುನಾಥ ಹಂದ್ರಾಳ ಮಾತನಾಡಿ ೬೦ ವರ್ಷದ ಸಾಧನೆ ಕೇವಲ ೫ ವರ್ಷದಲ್ಲಿ ಮಾಡಿದ ಕೀರ್ತಿ ವಾಜಪೇಯ ಯವರಿಗೆ ಸಲ್ಲುತ್ತದೆ. ಇಡಿ ದೇಶಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚತುಷ್ಪದ ರಸ್ತೆಗಳನ್ನು ಮಾಡಿದರು ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಇಡಿ ಪ್ರಪಂಚದಲ್ಲಿ ಭಾರತದ ಕಿರ್ತಿ ಪತಾಕಿ ಹಾರಿಸಿದರು ನಂತರೆ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ ವಾಜಪೇಯಿಯವರು ಎಲ್ಲಾ ಪಕ್ಷಗಳಿಗೆ ಬೇಕಾಗಿದ್ದರು. ಅವರೊಬ್ಬ ಅಜಾತಶತ್ರುಗಳಾಗಿ ಕರೆಯಲ್ಪಡುತ್ತಿದ್ದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಲತಾ ನಾಯಕ ರವರು ಸಹ ಮಾತನಾಡಿದರು.  ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಕರಡಿ, ನಗರ ಘಟಕ ಅಧ್ಯಕ್ಷರಾದ ಪ್ರವೀಣ ಇಟಗಿ,  ಮಹಾಂತೇಶ ಪಾಟೀಲ, ವಾಣಿಶ್ರೀ ವಸಂತಕುಮಾರ ಜಗದೀಶ ಗುತ್ತಿ, ಸಮಸ್ತ ಅಭಿಮಾನಿ ಬಳಗ ಉಪಸ್ಥಿತರಿದ್ದರು.

Related posts

Leave a Comment