ಬಹದ್ದೂರಬಂಡಿ ಕಂದಾಯ ಅದಾಲತ್.

 ಕೊಪ್ಪಳ,ಜು.೨೫: ಪಹಣಿ ಮತ್ತು ಆಕಾರ ಬಂದ್‌ಗಳಲ್ಲಿನ ವ್ಯತ್ಯಾಸ ಸರಿಪಡಿಸಿಕೊಳ್ಳಲು ಹೆಸರಿನಲ್ಲಿ ತಿದ್ದುಪಡಿ ಮಾಡಲು ಕಂದಾಯ ಅದಾಲತ್‌ನಂತಹ ಕಾರ್ಯಕ್ರಮಗಳು ಜನರಿಗೆ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಬಹದ್ದೂರಬಂಡಿ ಗ್ರಾಮದಲ್ಲಿ ಸತತ ೨ನೇ ಬಾರಿ ಕಂದಾಯ ಅದಾಲತ್‌ನ್ನು ಏರ್ಪಡಿಸಲಾಗಿದೆ ಎಂದು ಕಂದಾಯ ನಿರೀಕ್ಷಕ ಮಂಜುನಾಥ ಹಲಿಗೇರಿ ಹೇಳಿದರು.
ಅವರು ತಾಲೂಕಿನ ಬಹದ್ದೂರಬಂಡಿ-ಮುದ್ದಾಬಳ್ಳಿ ಗ್ರಾಮದಲ್ಲಿ ಶನಿವಾರದಂದು ಜರುಗಿದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನಂತರ ಉಪತಹಶೀಲ್ದಾರ್ ನಾಗರಾಜ ಕಬಾಡೆ ಮಾತನಾಡಿ, ವಯೋವೃದ್ದರಿಗೆ ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿಯೇ ಪರಿಹಾರ ಮಾಡಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಮಡು ಸದುಪಯೋಗ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀಮತಿ ಕೌಶಲ್ಯ ಮೂಲಿಮನಿ, ಆಸೀಫ್ ಅಲಿ, ಬಹದ್ದೂರಬಂಡಿ ಗ್ರಾ.ಪಂ.ಸದಸ್ಯರಾದ ಶಿವಣ್ಣ ಗ್ಯಾನಪ್ಪನವರ, ಗೋವಿಂದಪ್ಪ, ಬಾಬುಸಾಬ, ಕಾಸೀಮ್ ಬಿ.ಬನ್ನಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತ ಬಾಂಧವರು ಭಾಗವಹಿಸಿದ್ದರು.

Related posts

Leave a Comment